ಹೃದಯಸ್ಪರ್ಶಿಯಾಗಿದೆ ಬಡ ತಂದೆ-ಪುಟ್ಟ ಕಂದಮ್ಮಳ ಬಾಂಧವ್ಯದ ಈ ವಿಡಿಯೋ

ಅಪ್ಪ ಅಂದ್ರೆ ಹೆಣ್ಣುಮಕ್ಕಳಿಗೆ ವಿಶೇಷ ಪ್ರೀತಿ… ಅಪ್ಪ ಹಾಗೂ ಮಗಳ ಬಾಂಧವ್ಯವೇ ಹಾಗೇ… ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಬಡ ತಂದೆ ಹಾಗೂ ಪುಟ್ಟ ಕಂದಮ್ಮನ ವಾತ್ಸಲ್ಯಮಯ ವಿಡಿಯೋವೊಂದು ಎಂಥವರನ್ನೂ ಭಾವುಕರನ್ನಾಗಿ ಮಾಡುವಂತಿದೆ.

ಬಡ ತಂದೆಯೊಬ್ಬ ತನ್ನ ಪುಟ್ಟ ಮಗಳ ಜೊತೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ. ರೈಲು ಮರ-ಗಿಡ, ಬೆಟ್ಟ-ಗುಡ್ಡ ಎಲ್ಲವನ್ನೂ ಹಿಂದಿಕ್ಕಿ ಓಡುತ್ತಿರುವಂತೆ ಭಾಸವಾಗುತ್ತಿದೆ….. ಅದನ್ನೇ ನೋಡುತ್ತಾ ತಂದೆ ತನ್ನ ಪುಟ್ಟ ಮಗಳ ಜೊತೆ ರೈಲಿನ ಬಾಗಿಲ ಬಳಿ ಕುಳಿತಿದ್ದಾರೆ. ಪುಟ್ಟ ಕಂದಮ್ಮ ತನ್ನ ಕೈಲಿದ್ದ ತಿಂಡಿಯನ್ನು ತೆಗೆದು ಮೊದಲು ಅಪ್ಪನಿಗೆ ತಿನ್ನುವಂತೆ ಹೇಳಿದ್ದಾಳೆ. ಅಪ್ಪ, ಬೇಡ ನೀನು ತಿನ್ನು ಎಂದು ಸೂಚಿಸಿದ್ದಾರೆ. ಆದರೆ ಮಗು ಇಲ್ಲಾ ಎಂದು ತಲೆಯಾಡಿಸಿ ಅಪ್ಪನ ಬಾಯಿಗೆ ಇಟ್ಟಿದ್ದಾಳೆ. ಪುಟ್ಟ ಮಗುವಿನ ಮುಗ್ಧ ಪ್ರೀತಿಗೆ ಮಾರುಹೋದ ಅಪ್ಪ, ಪ್ರೀತಿಯಿಂದ ಕಂದಮ್ಮನ ತಲೆಸವರುತ್ತಾ ಎದೆಗಪ್ಪಿಕೊಂಡಿದ್ದಾರೆ. ಇದೇ ವೇಳೆ ಮಗು ಮತ್ತೊಂದು ತುತ್ತು ತೆಗೆದು ತಾನು ತಿನ್ನುವುದಾಗಿ ಹೇಳಿ ಅಪ್ಪನಿಗೆ ತೋರಿಸಿ ತಾನೂ ಸೇವಿಸಿದ್ದಾಳೆ. ಅಪ್ಪ ಹಾಗೂ ಮುದ್ದು ಪುಟಾಣಿಯ ಈ ಕೆಲವೇ ಕ್ಷಣಗಳ ವಿಡಿಯೋ ಹೃದಯಸ್ಪರ್ಶಿಯಾಗಿದ್ದು, ತಂದೆ-ಮಗಳ ಬಾಂಧವ್ಯ ಎಲ್ಲರ ಮನಮಿಡಿಯುವಂತಿದೆ.

 

https://youtube.com/shorts/if6S6oOc3Jo?si=DyFwMIMOAGXJ_rpp

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read