HomeLatest NewsBIG NEWS : ರಾಜ್ಯದ ರೈತರೇ ಗಮನಿಸಿ : ಪಶುಪಾಲನಾ ಇಲಾಖೆಯಿಂದ ಸಿಗುವ ಸಹಾಯಧನಗಳ ಬಗ್ಗೆ...

BIG NEWS : ರಾಜ್ಯದ ರೈತರೇ ಗಮನಿಸಿ : ಪಶುಪಾಲನಾ ಇಲಾಖೆಯಿಂದ ಸಿಗುವ ಸಹಾಯಧನಗಳ ಬಗ್ಗೆ ಇಲ್ಲಿದೆ ಮಾಹಿತಿ

ಬೆಂಗಳೂರು : ಪಶುಪಾಲನಾ ಇಲಾಖೆಯಿಂದ ಹೈನುಗಾರಿಕೆ, ಕುರಿ-ಮೇಕೆ ಸಾಕಣೆ, ಹಂದಿ ಸಾಕಣೆ, ಮತ್ತು ಕೋಳಿ ಸಾಕಣೆಗೆ ಸಹಾಯಧನ ಸಿಗುತ್ತದೆ. ಇದರಲ್ಲಿ ಮುಖ್ಯವಾಗಿ ಮಿಶ್ರತಳಿ ಹಸು/ಎಮ್ಮೆ ಖರೀದಿ (ರೂ. 60,000 ಘಟಕಕ್ಕೆ ಶೇ. 90 ರಷ್ಟು), ಜಾನುವಾರು ವಿಮೆ (ಪ್ರೀಮಿಯಂನಲ್ಲಿ ಶೇ. 85), ಮತ್ತು ಸಾಲದ ಮೇಲಿನ ಬಡ್ಡಿ ಸಹಾಯಧನ (ಮಹಿಳೆಯರಿಗೆ ಶೇ. 6 ರಷ್ಟು) ಮುಂತಾದ ಯೋಜನೆಗಳು ಇವೆ. ಇವುಗಳೊಂದಿಗೆ ಕೃತಕ ಗರ್ಭಧಾರಣೆ ಮತ್ತು ಪಶು ಚಿಕಿತ್ಸಾ ಸೇವೆಗಳು ಕೂಡ ಲಭ್ಯವಿದೆ.

ಹಾಲು ಉತ್ಪಾದಕರಿಗೆ ಉತ್ತೇಜನ

ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಸರಬರಾಜು ಮಾಡುವ ಸದಸ್ಯರಿಗೆ ಪ್ರತಿ ಲೀಟರ್ ಗುಣಾತ್ಮಕ ಹಾಲಿಗೆ ಗೆ ರೂ.5/-ಪ್ರೋತ್ಸಾಹಧನ ನೀಡಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಸುಗಳ ಆಕಸ್ಮಿಕ ಸಾವಿಗೆ ಅಪತ್ತುನಿಧಿ
ರಾಸುಗಳು ಆಕಸ್ಮಿಕ ಮರಣ ಹೊಂದಿದಾಗ ರೈತರಿಗೆ ಉಂಟಾಗುವ ಆರ್ಥಿಕ ನಷ್ಟವನ್ನು ಭರಿಸಲು ಮರಣ ಹೊಂದಿದ ಧನ, ಎಮ್ಮೆ ಹೋರಿ ಮತ್ತು ಕಡಸುಗಳಿಗೆ ರೂ 15,000/- ಪರಿಹಾರ ಧನವನ್ನು ರಾಸುಗಳ ಮಾಲೀಕರಿಗೆ ವಿತರಿಸಲಾಗುವುದು.

ಆಕಸ್ಮಿಕ ಮರಣ ಹೊಂದಿದ 3-6 ತಿಂಗಳ ವಯಸ್ಸಿನ ಕುರಿ / ಮೇಕೆಗಳಿಗೆ ರೂ. 3,500 ಹಾಗೂ 6 ತಿಂಗಳ ಮೇಲ್ಪಟ್ಟ ಕುರಿ/ಮೇಕೆಗಳಿಗೆ ಅವುಗಳ ಮಾಲೀಕರಿಗೆ ರೂ. 5000/-ಪರಿಹಾರ ವಿತರಣೆ ಮಾಡಲಾಗುವುದು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular