HomeKarnatakaಹಸುಗಳನ್ನು ತೊಳೆಯಲು ಕೆರೆಗೆ ಇಳಿದ ರೈತ; ಕಾಲು ಜಾರಿಬಿದ್ದು ನೀರು ಪಾಲು

ಹಸುಗಳನ್ನು ತೊಳೆಯಲು ಕೆರೆಗೆ ಇಳಿದ ರೈತ; ಕಾಲು ಜಾರಿಬಿದ್ದು ನೀರು ಪಾಲು

ದೊಡ್ದಬಳ್ಳಾಪುರ: ಹಸುಗಳನ್ನು ತೊಳೆಯಲೆಂದು ಕೆರೆಗೆ ಇಳಿದಿದ್ದ ರೈತ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರುಪಾಲಾಗಿ ಮೃತಪಟ್ಟ ಘಟನೆ ದೊಡ್ಡಬಳ್ಳಾಪುರ ಜಿಲ್ಲೆಯ ಒಡೇರಹಳ್ಳಿಯಲ್ಲಿ ನಡೆದಿದೆ.

ರಾಂಪುರ ಗ್ರಾಮದ ನಿವಾಸಿ ಕುಮಾರ್ (43) ಮೃತ ದುರ್ದೈವಿ. ಹಸುಗಳ ಮೈತೊಳೆಯಲೆಂದು ಆರು ಹಸುಗಳೊಂದಿಗೆ ಕೆರೆಗೆ ಹೋಗಿದ್ದ ರೈತ ಕುಮಾರ್, ಹಸುಗಳ ಮೈತೊಳೆಸಿ ಕಳುಹಿಸಿದ್ದಾನೆ. ಹಸುಗಳು ವಾಪಸ್ ಆದರೂ ರೈತ ಮನೆಗೆ ಬಂದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರಿಂದ ಅನುಮಾನಗೊಂಡ ಕುಟುಂಬದವರು ಕೆರೆ ಬಳಿ ಹೋಗಿ ನೋಡಿದ್ದಾರೆ. ಕೆರೆ ಬಳಿ ಚಪ್ಪಲಿ, ಕೋಲು ಬಿದ್ದಿರುವುದನ್ನು ಗಮನಸಿದ್ದಾರೆ. ತಕ್ಷಣ ದೊಡ್ಡಬೆಳವಂಗಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಕೆರೆಯಲ್ಲಿ ಶೋಧ ಕಾರ್ಯಾಚಾರಣೆ ನಡೆಸಿದ ಪೊಲೀಸರು ಮೃತದೇಹವನ್ನು ಕೆರೆಯಿಂದ ಹೊರತೆಗೆದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular