HomeLatest NewsBIG NEWS: ಎತ್ತಿನ ಮೈ ತೊಳೆಯಲು ನದಿಗೆ ಇಳಿದಿದ್ದ ರೈತನನ್ನು ಎಳೆದೊಯ್ದ ಮೊಸಳೆ

BIG NEWS: ಎತ್ತಿನ ಮೈ ತೊಳೆಯಲು ನದಿಗೆ ಇಳಿದಿದ್ದ ರೈತನನ್ನು ಎಳೆದೊಯ್ದ ಮೊಸಳೆ

ವಿಜಯಪುರ: ಎತ್ತಿನ ಮೈ ತೊಳೆಯಲು ಕೃಷ್ಣಾ ನದಿಗೆ ಇಳಿದಿದ್ದ ರೈತನನ್ನು ಮೊಸಳೆ ಎಳೆದೊಯ್ದಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ತಾಲೂಕಿನ ತಂಗಡಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.

ಇಲ್ಲಿನ್ ಅಕುಂಚಗನೂರ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಕಾಶಿನಾಥ ಹಣಮಂತ ಕಂಬಳಿ (38) ಮೊಸಳೆ ದಾಳಿಗೆ ಒಳಗಾಗಿರುವ ರೈತ. ಕಾಶಿನಾಥನನ್ನು ಮೊಸಳೆ ಎಳೆದೊಯ್ದಿದೆ ಎಂದು ಮತ್ತೋರ್ವ ರೈತ ಧರೆಪ್ಪ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ದೌಡಾಯಿಸಿ ಕಾಶಿನಾಥನಿಗಾಗಿ ನಡಿಯಲ್ಲಿ ಶೋಧ ನಡೆಸಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular