HomeLive News"ನಿಮ್ಮ BMW ಕಾರು ನಂದೇ ಅಲ್ವಾ?": ಅಡುಗೆಯವ ದಿಲೀಪ್ ಮಾತು ಕೇಳಿ ಫರಾ ಖಾನ್ ಫುಲ್...

“ನಿಮ್ಮ BMW ಕಾರು ನಂದೇ ಅಲ್ವಾ?”: ಅಡುಗೆಯವ ದಿಲೀಪ್ ಮಾತು ಕೇಳಿ ಫರಾ ಖಾನ್ ಫುಲ್ ಶಾಕ್!

ಫರಾ ಖಾನ್ ಅವರ ಯೂಟ್ಯೂಬ್ ವ್ಲಾಗ್‌ಗಳಲ್ಲಿ ಈಗ ಫರಾ ಅವರಿಗಿಂತ ಅವರ ಅಡುಗೆಯವ ದಿಲೀಪ್ (Dilip Mukhiya) ಅವರೇ ಹೆಚ್ಚು ಜನಪ್ರಿಯರಾಗಿದ್ದಾರೆ. ಇತ್ತೀಚಿನ ವ್ಲಾಗ್‌ವೊಂದರಲ್ಲಿ ದಿಲೀಪ್ ಅವರು ಫರಾ ಖಾನ್ ಅವರ ಐಷಾರಾಮಿ BMW ಕಾರನ್ನು ತಮ್ಮ ಪ್ರಯಾಣಕ್ಕೆ ಬಳಸುತ್ತಿರುವುದಾಗಿ ಹೇಳಿರುವುದು ಫರಾ ಅವರನ್ನು ದಂಗಾಗಿಸಿದೆ.

ನಡೆದಿದ್ದೇನು? ‘ಬಿಗ್ ಬಾಸ್ 19’ ಖ್ಯಾತಿಯ ಪ್ರಣೀತ್ ಮೋರೆ ಅವರ ಮನೆಗೆ ಫರಾ ಖಾನ್ ಮತ್ತು ದಿಲೀಪ್ ಭೇಟಿ ನೀಡಿದ್ದಾಗ ಈ ಪ್ರಸಂಗ ನಡೆದಿದೆ. ಪ್ರಣೀತ್ ಅವರ ತಂದೆ, “ಹಿಂದಿನ ವೀಡಿಯೊದಲ್ಲಿ ಕಂಡ ದೊಡ್ಡ ಕಾರನ್ನು ದಿಲೀಪ್ ಅವರೇ ಖರೀದಿಸಿದ್ದಾರೆಯೇ?” ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಫರಾ, “ಇಲ್ಲ, ಅವರು ಇಂದಿಗೂ ಟೂ-ವೀಲರ್‌ನಲ್ಲೇ ಓಡಾಡುತ್ತಾರೆ” ಎಂದು ತಮಾಷೆ ಮಾಡಿದರು. ಆದರೆ ತಕ್ಷಣವೇ ಮದ್ಯಪ್ರವೇಶಿಸಿದ ದಿಲೀಪ್, “ನಿಮ್ಮ BMW ಕಾರು ಇದೆಯಲ್ಲ!” ಎಂದು ಉತ್ತರಿಸಿದರು.

ಫರಾ ಖಾನ್ ಶಾಕ್: ದಿಲೀಪ್ ಅವರ ಈ ಉತ್ತರ ಕೇಳಿ ಫರಾ ಅಕ್ಷರಶಃ ಅವಕ್ಕಾದರು. ಪ್ರಣೀತ್ ತಂದೆ ಕೂಡ ದಿಲೀಪ್ ಅವರನ್ನು ಡ್ರೈವರ್ ಜೊತೆ ಆ ಕಾರಿನಲ್ಲಿ ನೋಡಿರುವುದಾಗಿ ಹೇಳಿದಾಗ, ಫರಾ ಅವರು “ಡ್ರೈವರ್ ಕೂಡ ಇದ್ದನೇ? ನೀವಿಬ್ಬರೂ ಆ ಕಾರಿನಲ್ಲಿ ಲೋನಾವಲಾದಲ್ಲಿ ಎಲ್ಲಿ ಸುತ್ತುತ್ತಿದ್ದಿರಿ?” ಎಂದು ಅಚ್ಚರಿಯಿಂದ ಪ್ರಶ್ನಿಸಿದ್ದಾರೆ. ದಿಲೀಪ್ ಅವರು ಫರಾ ಅವರ ಕಾರನ್ನೇ ತಮ್ಮದು ಎಂಬಂತೆ ಊರಿನಲ್ಲಿ ಹೇಳಿಕೊಳ್ಳುತ್ತಿರಬಹುದು ಎಂದು ಪ್ರಣೀತ್ ಕಾಲೆಳೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಡುಗೆಯವನಿಂದ ಸೂಪರ್‌ಸ್ಟಾರ್‌ವರೆಗೆ ದಿಲೀಪ್ ಪಯಣ:

  • ಹumble ಬಿಗಿನಿಂಗ್: ಬಿಹಾರದ ದರ್ಭಂಗ ಮೂಲದ ದಿಲೀಪ್, 12 ವರ್ಷಗಳ ಹಿಂದೆ ಕೇವಲ 300 ರೂಪಾಯಿ ಸಂಬಳಕ್ಕೆ ದೆಹಲಿಯಲ್ಲಿ ಕೆಲಸಕ್ಕೆ ಸೇರಿದ್ದರು.
  • ಫರಾ ಖಾನ್ ಮನೆಗೆ ಎಂಟ್ರಿ: 10 ವರ್ಷಗಳ ಹಿಂದೆ ಫರಾ ಖಾನ್ ಅವರ ಮನೆಗೆ 20,000 ರೂಪಾಯಿ ಸಂಬಳಕ್ಕೆ ಅಡುಗೆಯವರಾಗಿ ಬಂದರು.
  • ಈಗಿನ ಆದಾಯ: ವರದಿಗಳ ಪ್ರಕಾರ, ಯೂಟ್ಯೂಬ್ ವ್ಲಾಗ್‌ಗಳ ಯಶಸ್ಸಿನ ನಂತರ ದಿಲೀಪ್ ಅವರ ತಿಂಗಳ ಆದಾಯ ಈಗ 1 ಲಕ್ಷ ರೂಪಾಯಿ ದಾಟಿದೆ. ಅಲ್ಲದೆ ವ್ಲಾಗ್‌ನ ಆದಾಯದಲ್ಲಿ ಅವರಿಗೆ ಪಾಲನ್ನು ನೀಡಲಾಗುತ್ತಿದೆ.
  • ಆಸ್ತಿ ಪಾಸ್ತಿ: ದಿಲೀಪ್ ಅವರು ಬಿಹಾರದಲ್ಲಿ 6 ಬೆಡ್‌ರೂಂಗಳ 3 ಅಂತಸ್ತಿನ ದೊಡ್ಡ ಬಂಗಲೆ ನಿರ್ಮಿಸುತ್ತಿದ್ದಾರೆ. ಅದರಲ್ಲಿ ಸ್ವಿಮ್ಮಿಂಗ್ ಪೂಲ್ ಕಟ್ಟುವ ಯೋಜನೆಯೂ ಅವರಿಗಿದೆ.
  • ಸ್ಟಾರ್ ಜಾಹೀರಾತುಗಳು: ಕೇವಲ ಅಡುಗೆಗೆ ಸೀಮಿತವಾಗದ ದಿಲೀಪ್, ಶಾರುಖ್ ಖಾನ್ ಮತ್ತು ಕಿಯಾರಾ ಅಡ್ವಾಣಿ ಅವರೊಂದಿಗೆ ಮಿಂತ್ರಾ (Myntra) ಹಾಗೂ ಫ್ಲಿಪ್‌ಕಾರ್ಟ್ ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ.

ಫರಾ ಖಾನ್ ತಮ್ಮ ವ್ಲಾಗ್‌ಗಳ ಮೂಲಕ ದಿಲೀಪ್ ಅವರ ಮಕ್ಕಳ ಶಿಕ್ಷಣಕ್ಕೂ ನೆರವು ನೀಡುತ್ತಿದ್ದು, ಈ ಮಾಲೀಕ-ಕೆಲಸಗಾರನ ನಡುವಿನ ಆತ್ಮೀಯ ಸಂಬಂಧ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular