ಅಭಿಮಾನಿಗಳನ್ನು ದಾರಿತಪ್ಪಿಸುವ ಬಾಲಿವುಡ್ ಸ್ಟಾರ್ಸ್; ಸ್ಪೋಟಕ ಸಂಗತಿ ಬಿಚ್ಚಿಟ್ಟ ಫರಾಖಾನ್

ನಿರ್ದೇಶಕಿ- ನಿರ್ಮಾಪಕಿ ಫರಾ ಖಾನ್ ಬಾಲಿವುಡ್ ನಲ್ಲಿ ನಟ- ನಟಿಯರು ಹೇಗೆ ತಮ್ಮ ಅಭಿಮಾನಿಗಳನ್ನು ತಪ್ಪು ದಾರಿಗೆ ಎಳೆಯುತ್ತಾರೆ ಎಂಬುದರ ಬಗ್ಗೆ ಸ್ಪೋಟಕ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

ಶಾರುಖ್ ಖಾನ್, ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ ಮತ್ತು ಅಮಿತಾಬ್ ಬಚ್ಚನ್ ಅವರಂತಹ ಸೂಪರ್‌ಸ್ಟಾರ್‌ಗಳೊಂದಿಗೆ ಕೆಲಸ ಮಾಡಿ ಹೆಸರುವಾಸಿಯಾಗಿರುವ ಚಲನಚಿತ್ರ ನಿರ್ಮಾಪಕಿ, ಕೊರಿಯಾಗ್ರಾಫರ್ ಫರಾ ಖಾನ್, ಬಾಲಿವುಡ್ ನಟರ ಆಘಾತಕಾರಿ ವರ್ತನೆಗಳನ್ನು ಬಹಿರಂಗಪಡಿಸುವಿಕೆಯ ಸರಣಿ ಮಾಡಿದ್ದಾರೆ.

ರೆಡ್ಡಿಟ್‌ನಲ್ಲಿ ಹಂಚಿಕೊಂಡ ವೈರಲ್ ವಿಡಿಯೊದಲ್ಲಿ ಬಾಲಿವುಡ್ ನಟರು ಆಗಾಗ್ಗೆ ಹೇಳುವ ಐದು ವಿಷಯಗಳನ್ನು ಫರಾ ಬಹಿರಂಗಪಡಿಸಿದ್ದಾರೆ. ಬಾಲಿವುಡ್ ಸ್ಟಾರ್ಸ್ ಸಾಮಾನ್ಯವಾಗಿ ನಾವು ಜಿಮ್‌ಗೆ ಹೋಗುವುದಿಲ್ಲ ಮತ್ತು ತಮಗೆ ತಿನ್ನಬೇಕೆನಿಸಿದನ್ನೆಲ್ಲಾ ಸಾಕಾಗುವಷ್ಟು ತಿನ್ನುತ್ತೇವೆ ಎಂದು ಹೇಳುತ್ತಾರೆ, ಆದರೆ ಅದು ನಿಜವಲ್ಲ ಎಂದು ಫರಾ ಹೇಳಿದ್ದಾರೆ. ಸ್ಟಾರ್ಸ್ ತೆಳ್ಳಗಿರಬೇಕೆಂಬ ಕಾರಣಕ್ಕೆ ಅವರು ತಿನ್ನದೇ ಹಸಿವಿನಿಂದ ಇರುತ್ತಾರೆ ಇಲ್ಲವೇ 24×7 ಸಮಯ ಜಿಮ್‌ನಲ್ಲಿರುತ್ತೀರಿ ಎಂದು ಫರಾ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಸೆಲೆಬ್ರಿಟಿಗಳು ತಮ್ಮ ಜಿಮ್‌ನ ಹೊರಗೆ ಸ್ವತಃ ಪಾಪರಾಜಿಗಳನ್ನು ಕರೆಸುತ್ತಾರೆ. ಈ ವೇಳೆ ಪಾಪರಾಜಿಗಳು ಫೋಟೋ ಕ್ಲಿಕ್ ಮಾಡಿದ ನಂತರ ನಟಿ ಆಶ್ಚರ್ಯಚಕಿತರಾಗುತ್ತಾರೆ ಎಂದು ಫರಾ ಹೇಳಿದ್ದಾರೆ. ನಟಿ ಪ್ರೀತಿ ಜಿಂಟಾ ಜಿಮ್‌ನಿಂದ ಬರುತ್ತಿರುವ ವಿಡಿಯೋ ಹಂಚಿಕೊಂಡಿದ್ದು ಇದರಲ್ಲಿ ಪ್ರೀತಿ ಜಿಂಟಾ ನಾನು ಇಲ್ಲಿದ್ದೇನೆಂಬ ಬಗ್ಗೆ ಯಾರು ಮಾಹಿತಿ ನೀಡಿದರು ಎಂದು ಪಾಪರಾಜಿಗಳನ್ನು ಪ್ರಶ್ನಿಸಿದ್ದು ನೀವೇ ಹೇಳಿದ್ದರಲ್ಲಾ ಮೇಡಂ ಎಂದು ಅವರು ಉತ್ತರಿಸಿದ್ದಾರೆ. ಹೀಗೆ ಸ್ಟಾರ್ಸ್ ಖುದ್ದು ತಾವೇ ಪಾಪರಾಜಿಗಳಿಗೆ ತಾವಿರುವ ಸ್ಥಳಕ್ಕೆ ಬರುವಂತೆ ಸೂಚಿಸುತ್ತಾರೆ ಎಂಬುದನ್ನ ಫರಾ ತಿಳಿಸಿದ್ದಾರೆ.

ಇಷ್ಟೇ ಅಲ್ಲ, ಸೆಲೆಬ್ರಿಟಿಗಳು ಸಾಮಾನ್ಯ ಜನರಂತೆ ವರ್ತಿಸಲು ಹೇಗೆ ನಟಿಸುತ್ತಾರೆ ಎಂಬುದರ ಬಗ್ಗೆಯೂ ಸಹ ಫರಾ ಖಾನ್ ಗಮನಸೆಳೆದಿದ್ದಾರೆ. “ನಾನು ಸಾಮಾನ್ಯ ವ್ಯಕ್ತಿಯಂತೆ ಜೀವಿಸುವುದನ್ನು ಕಳೆದುಕೊಂಡಿದ್ದೇನೆ. ನಿಮಗೆ ಗೊತ್ತಾ, ನಾನು ರಸ್ತೆಗಳಲ್ಲಿ ಪಾನಿ ಪುರಿ ತಿನ್ನುವುದನ್ನು ಮಿಸ್ ಮಾಡಿಕೊಳ್ಳುತ್ತೇನೆ ” ಎನ್ನುತ್ತಾರೆ. ಅರೆ ! ಅವರು ಸಾಮಾನ್ಯ ವ್ಯಕ್ತಿಗಳಾದರೆ ಸಾಯುತ್ತಾರೆ ಎಂದು ಫರಾ ಹೇಳಿದರು.

ಸೆಲೆಬ್ರಿಟಿಗಳು ತಮ್ಮ ಸಿನಿಮಾಗಳ ಬಾಕ್ಸ್ ಆಫೀಸ್ ವೈಫಲ್ಯದಿಂದ ಹತಾಶರಾಗದಂತೆ ನಟಿಸುತ್ತಾರೆ ಎಂದಿರುವ ಫರಾ ಖಾನ್ ಸಿನಿಮಾ ಸೋಲಿನಿಂದ ಸೆಲೆಬ್ರಿಟಿಗಳು ಕಸಿವಿಸಿ ಅನುಭವಿಸುತ್ತಾರೆ ಎಂಬುದನ್ನ ಪರೋಕ್ಷವಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ, ಕಾರ್ಯಕ್ರಮಕ್ಕೆ ತಡವಾಗಿ ಬರುವ ಬಗ್ಗೆ ಸ್ಟಾರ್ಸ್ ಹೇಗೆ ಸುಳ್ಳು ಹೇಳುತ್ತಾರೆ ಎಂಬುದನ್ನು ಫರಾ ಬಹಿರಂಗಪಡಿಸಿದ್ದಾರೆ. ಇದಕ್ಕಾಗಿ ಈವೆಂಟ್‌ಗೆ ತಡವಾಗಿ ಬಂದ ಪ್ರಿಯಾಂಕಾ ಚೋಪ್ರಾ ಕ್ಷಮೆ ಕೇಳುವ ವಿಡಿಯೋವನ್ನ ಹಂಚಿಕೊಳ್ಳಲಾಗಿದೆ.

Farah Khan keeping it real. Confirming that paparazzi at gym/airport are booked by the celebrity themselves.
byu/BollyLOVER1 inBollyBlindsNGossip

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read