HomeIndiaಪ್ರಚಾರಕ್ಕೆ ಹೋದ ಬಾಲಿವುಡ್ ನಟರ ಮೇಲೆ ಚಪ್ಪಲಿ ಎಸೆದ ಅಭಿಮಾನಿಗಳು |Video Viral

ಪ್ರಚಾರಕ್ಕೆ ಹೋದ ಬಾಲಿವುಡ್ ನಟರ ಮೇಲೆ ಚಪ್ಪಲಿ ಎಸೆದ ಅಭಿಮಾನಿಗಳು |Video Viral

ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ತಮ್ಮ ಮುಂದಿನ ಚಿತ್ರ ‘ಬಡೇ ಮಿಯಾ ಚೋಟೆ ಮಿಯಾ’ ಪ್ರಚಾರಕ್ಕಾಗಿ ಫೆಬ್ರವರಿ 26 ರಂದು ಲಕ್ನೋಗೆ ಹೋಗಿದ್ದು, ಈ ವೇಳೆ ಅಭಿಮಾನಿಗಳು ಚಪ್ಪಲಿ ತೂರಿದ ಘಟನೆ ನಡೆದಿದೆ.

ಚಿತ್ರದ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಜನಸಂದಣಿ ಹೆಚ್ಚಾಗಿ ತಳ್ಳಾಟ-ನೂಕಾಟ ನಡೆದಿದೆ. ಪರಿಣಾಮ ಕೆಲವರು ಕಲ್ಲುಗಳು ಮತ್ತು ಚಪ್ಪಲಿಗಳನ್ನು ಪರಸ್ಪರ ಎಸೆದುಕೊಂಡಿದ್ದಾರೆ. ಈ ವೇಳೆ ನಟರ ಮೇಲೆ ಕೂಡ ಚಪ್ಪಲಿಗಳು ತೂರಿಬಂದಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಉದ್ರಿಕ್ತ ಗುಂಪಿನ ಮೇಲೆ ಲಾಠಿ ಪ್ರಹಾರ ನಡೆಸಿದರು.

ಅಭಿಮಾನಿಗಳು ಅಕ್ಷಯ್ ಕುಮಾರ್ ಹಾಗೂ ಟೈಗರ್ ಗೆ ಹಾಡು ಹೇಳುವಂತೆ ಮನವಿ ಮಾಡಿದ್ದರು. ಮತ್ತೆ ಕೆಲವರು ಇ ಹಲವು ಬೇಡಿಕೆಗಳನ್ನು ಇಬ್ಬರು ನಟರ ಮುಂದಿಟ್ಟಿದ್ದರು. ಆದರೆ, ನೋಡ ನೋಡುತ್ತಿದ್ದಂತೆ ಅಭಿಮಾನಿಗಳ ನಡುವೆ ಗಲಾಟೆ ಆಗಿದೆ.  ಲಕ್ನೋದ ಕ್ಲಾಕ್ ಟವರ್ ಬಳಿ ಈ ಘಟನೆ ನಡೆದಿದ್ದು, ಅಕ್ಷಯ್ ಮತ್ತು ಟೈಗರ್ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಅಭಿಮಾನಿಗಳು ಗಲಾಟೆ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular