ಖ್ಯಾತ ನಿರೂಪಕಿ ಅನುಶ್ರೀ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು. ಕೊಡಗು ಮೂಲದ ಉದ್ಯಮಿ ರೋಷನ್ ಜೊತೆಗೆ ನಿರೂಪಕಿ ಅನುಶ್ರೀ ಮದುವೆ ಇಂದು ನೆರವೇರಿದೆ.
ಗುರುವಾರ ಬೆಳಿಗ್ಗೆ 10:56ರ ಶುಭ ಮುಹೂರ್ತದಲ್ಲಿ ಅನುಶ್ರೀ, ರೋಷನ್ ಮದುವೆ ನೆರವೇರಿದೆ. ಬೆಂಗಳೂರು ಹೊರವಲಯದ ಖಾಸಗಿ ರೆಸಾರ್ಟ್ ನಲ್ಲಿ ಮದುವೆ ನಡೆದಿದ್ದು, ಸಿನಿ ಗಣ್ಯರು, ಕಲಾವಿದರು ಭಾಗವಹಿಸಿದ್ದರು.
ಆಹ್ವಾನಿತರಿಗೆ ಮಾತ್ರ ಅನುಶ್ರೀ ಮದುವೆಗೆ ಬರಲು ಅವಕಾಶ ನೀಡಲಾಗಿತ್ತು. ಅನುಶ್ರೀ ಮತ್ತು ರೋಷನ್ ಬಹುಕಾಲದ ಗೆಳೆಯರು. ರೋಷನ್ ಕೊಡಗು ಮೂಲದ ಉದ್ಯಮಿಯಾಗಿದ್ದಾರೆ. ಇಬ್ಬರು ಕೂಡ ಅಪ್ಪು ಅಭಿಮಾನಿಗಳು. ಪರಸ್ಪರ ಒಬ್ಬರನೊಬ್ಬರನ್ನು ಅರಿತಿರುವ ಈ ಜೋಡಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಅರಿಶಿಣ ಶಾಸ್ತ್ರ ನೆರವೇರಿಸಲಾಗಿದ್ದು, ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿವೆ.


