HomeIndiaತಮ್ಮಂತೆಯೇ ಸೀರೆಯುಟ್ಟು ಭರ್ಜರಿ ಲೂಟಿಗೆ ಇಳಿದಿದ್ದ ಪುರುಷರ ಅಸಲಿ ಮುಖವಾಡ ಕಳಚಿದ ಅಸಲಿ ಮಂಗಳಮುಖಿಯರು: ವಿಡಿಯೋ...

ತಮ್ಮಂತೆಯೇ ಸೀರೆಯುಟ್ಟು ಭರ್ಜರಿ ಲೂಟಿಗೆ ಇಳಿದಿದ್ದ ಪುರುಷರ ಅಸಲಿ ಮುಖವಾಡ ಕಳಚಿದ ಅಸಲಿ ಮಂಗಳಮುಖಿಯರು: ವಿಡಿಯೋ ವೈರಲ್

ಛಿಂದ್ವಾರ : ಮದುವೆ ಹಾಗೂ ಇತರೆ ಶುಭ ಸಮಾರಂಭಗಳಲ್ಲಿ ಮಂಗಳಮುಖಿಯರು (ತೃತೀಯ ಲಿಂಗಿಗಳು) ಬಂದು ನವಜೋಡಿಯನ್ನು ಹರಸಿ, ತಮಗಿಷ್ಟ ಬಂದಷ್ಟು ಹಣ ಅಥವಾ ಉಡುಗೊರೆ ಪಡೆದು ಹೋಗುವುದು ನಮ್ಮಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಒಂದು ಸಾಂಪ್ರದಾಯಿಕ ನಂಬಿಕೆ. ಆದರೆ, ಇಲ್ಲೊಂದು ಕಿಲಾಡಿ ಯುವಕರ ಗ್ಯಾಂಗ್, ಇದೇ ಸಾಂಪ್ರದಾಯಿಕ ಭಾವನೆಗಳನ್ನು ಬಂಡವಾಳ ಮಾಡಿಕೊಂಡು ಲೂಟಿಗೆ ಇಳಿದಿತ್ತು ಮಂಗಳಮುಖಿಯರಂತೆ ವೇಷ ಧರಿಸಿ ಮದುವೆ ಮನೆಯಲ್ಲಿ ಭಾರಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಈ ನಕಲಿ ಗ್ಯಾಂಗ್‌ನ ಮುಖವಾಡ ಕಳಚಿ, ಮಹಿಳೆಯರು ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿರುವ ವಿಲಕ್ಷಣ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಛಿಂದ್ವಾರಾ ಜಿಲ್ಲೆಯ ಪರಸಿಯಾ ಪ್ರದೇಶದ ದರ್ಬಾಯ್ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಜಾಗರೂಕ ನಾಗರಿಕರು ಈ ವಂಚಕ ಜಾಲವನ್ನು ಅತ್ಯಂತ ಜಾಣಾಕ್ಷತನದಿಂದ ಪತ್ತೆಹಚ್ಚಿದ್ದು, ಇದರ ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಅನುಮಾನ ಮೂಡಿಸಿದ ಅತಿಯಾದ ನೇಗ್ ಬೇಡಿಕೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದರ್ಬಾಯ್ ಗ್ರಾಮದಲ್ಲಿ ವೈಭವದ ಮದುವೆ ಸಮಾರಂಭ ನಡೆಯುತ್ತಿದ್ದಾಗ, ಮಂಗಳಮುಖಿಯರಂತೆ ಸೀರೆ ಉಟ್ಟು, ಮೇಕಪ್ ಮಾಡಿಕೊಂಡಿದ್ದ ಪುರುಷರ ಗುಂಪೊಂದು ಮಂಟಪಕ್ಕೆ ಎಂಟ್ರಿ ಕೊಟ್ಟಿದೆ. ಅಲ್ಲಿಗೆ ಬಂದವರು ವಧು-ವರರ ಕುಟುಂಬಸ್ಥರ ಬಳಿ ಸಾಂಪ್ರದಾಯಿಕ ಉಡುಗೊರೆ ಹಾಗೂ ನೇಗ್ (ಶುಭ ಶಕುನದ ಹಣ) ರೂಪದಲ್ಲಿ ಭಾರಿ ದೊಡ್ಡ ಮೊತ್ತದ ಹಣವನ್ನು ನೀಡುವಂತೆ ಪಟ್ಟು ಹಿಡಿದಿದ್ದಾರೆ. ಆದರೆ, ಇವರ ಧ್ವನಿ, ಅಸಹಜ ವರ್ತನೆ ಮತ್ತು ಅತಿಯಾದ ಒತ್ತಾಯವನ್ನು ಕಂಡು ಅಲ್ಲಿದ್ದ ಗ್ರಾಮಸ್ಥರಿಗೆ ಸಣ್ಣದೊಂದು ಅನುಮಾನ ಮೂಡಿದೆ.

ಅಸಲಿ ಮಂಗಳಮುಖಿಯರು ಎಂಟ್ರಿ ಕೊಡ್ತಿದ್ದಂತೆ ಗೇಮ್ ಓವರ್

ಗ್ರಾಮಸ್ಥರು ಸಮಯಪ್ರಜ್ಞೆ ಮೆರೆದು ತಕ್ಷಣವೇ ಸ್ಥಳೀಯ ಮಂಗಳಮುಖಿ ಸಮುದಾಯದ ಮುಖಂಡರಿಗೆ ಫೋನ್ ಮೂಲಕ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಸ್ಥಳಕ್ಕೆ ಧಾವಿಸಿದ ನೈಜ ತೃತೀಯ ಲಿಂಗಿ ಸಮುದಾಯದ ಸದಸ್ಯರು ಈ ಅಪರಿಚಿತ ವೇಷಧಾರಿಗಳ ಐಡೆಂಟಿಟಿಯನ್ನು ಪರಿಶೀಲಿಸಲು ಶುರು ಮಾಡಿದ್ದಾರೆ. ಅವರ ತನಿಖೆಯ ವೇಳೆ, ಮಂಗಳಮುಖಿಯರ ಸೀರೆಯುಟ್ಟಿದ್ದವರು ಬೇರೆ ಯಾರೂ ಅಲ್ಲ, ಹಣದ ಆಸೆಗೆ ವೇಷ ಧರಿಸಿದ್ದ ಅದೇ ಭಾಗದ ಯುವಕರು ಎಂಬ ಹಸಿಬಿಸಿ ಸತ್ಯ ಸಂಪೂರ್ಣವಾಗಿ ಜಗಜ್ಜಾಹೀರಾಗಿದೆ

ಧಾರ್ಮಿಕ ನಂಬಿಕೆ ಹಾಗೂ ಸಾಂಪ್ರದಾಯಿಕ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು ಮೋಸ ಮಾಡಲು ಬಂದಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಮದುವೆ ಮನೆಯಲ್ಲಿದ್ದ ಮಹಿಳೆಯರು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಆ ವೇಷಧಾರಿ ಯುವಕರನ್ನು ಹಿಡಿದು ನಡುರಸ್ತೆಯಲ್ಲೇ ಅವರ ಸೀರೆ, ವಿಗ್‌ಗಳನ್ನು ಎಳೆದೊಗೆದಿದ್ದಾರೆ. ಅಷ್ಟಕ್ಕೇ ನಿಲ್ಲಿಸದ ಮಹಿಳೆಯರು, ಆ ನಕಲಿ ವ್ಯಕ್ತಿಗಳಿಗೆ ಕಪಾಳಮೋಕ್ಷ ಮಾಡಿ, ಚಪ್ಪಲಿಯಿಂದ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.ಅಲ್ಲಿದ್ದ ಸಾರ್ವಜನಿಕರು ಈ ಕಂಪ್ಲೀಟ್ ಹೈ-ವೋಲ್ಟೇಜ್ ಡ್ರಾಮಾವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದಿದ್ದು, ಸದ್ಯ ಈ ವಿಡಿಯೋ ಇಂಟರ್ನೆಟ್‌ನಲ್ಲಿ ತಲ್ಲಣ ಮೂಡಿಸಿದೆ.

ಇದೇ ಮೊದಲಲ್ಲ, ಇದು ಈ ಗ್ಯಾಂಗ್‌ನ ಹಳೇ ಚಾಳಿ

ಸ್ಥಳೀಯ ನಿವಾಸಿಗಳ ಪ್ರಕಾರ, ಈ ನಕಲಿ ಯುವಕರ ಗ್ಯಾಂಗ್ ಇಂತಹ ಕೆಲಸ ಮಾಡಿ ಸಿಕ್ಕಿಬೀಳುತ್ತಿರುವುದು ಇದೇ ಮೊದಲಲ್ಲವಂತೆ. ಈ ಹಿಂದೆಯೂ ಈ ಭಾಗದಲ್ಲಿ ನಡೆದ ಹಲವು ಮದುವೆಗಳು, ಮಗುವಿನ ಜನನ ಹಾಗೂ ಗೃಹಪ್ರವೇಶದಂತಹ ಆಚರಣೆಗಳಿಗೆ ಇದೇ ರೀತಿ ಮಂಗಳಮುಖಿಯರಂತೆ ನಟಿಸುತ್ತಾ ನುಗ್ಗಿ, ಅಮಾಯಕ ಕುಟುಂಬಗಳಿಂದ ಸಾವಿರಾರು ರೂಪಾಯಿಗಳನ್ನು ದೋಚುತ್ತಿದ್ದರು ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲವಾದರೂ, ಸಾರ್ವಜನಿಕರಲ್ಲಿ ಇಂತಹ ವಂಚಕರ ಬಗ್ಗೆ ಜಾಗೃತಿ ಮೂಡಿಸಲು ಈ ವಿಡಿಯೋ ನೆರವಾಗುತ್ತಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular