HomeKarnatakaBIG NEWS: ನಕಲಿ ಟಿಕೆಟ್ ಪಡೆದು ಏರ್ ಪೋರ್ಟ್ ಟರ್ಮಿನಲ್ ಪ್ರವೇಶಿಸಿದ ಮಹಿಳೆ; ಕೆಐಎನಲ್ಲಿ ಪೊಲೀಸರ...

BIG NEWS: ನಕಲಿ ಟಿಕೆಟ್ ಪಡೆದು ಏರ್ ಪೋರ್ಟ್ ಟರ್ಮಿನಲ್ ಪ್ರವೇಶಿಸಿದ ಮಹಿಳೆ; ಕೆಐಎನಲ್ಲಿ ಪೊಲೀಸರ ವಶಕ್ಕೆ

ಬೆಂಗಳೂರು: ಸ್ನೇಹಿತನನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಲು ಮಹಿಳೆಯೊಬ್ಬರು ನಕಲಿ ಟಿಕೆಟ್ ಪಡೆದು ಟರ್ಮಿನಲ್ ಪ್ರವೇಶಿಸಿ ಹೊರಬರುವಾಗ ಸಿಕ್ಕಿ ಬಿದ್ದ ಘಟನೆ ನಡೆದಿದೆ.

ಹರ್ಷಿತ್ ಕೌರ್ ಪೊಲೀಸರು ವಶಕ್ಕೆ ಪಡೆದ ಮಹಿಳೆ. ಆಯುಶ್ ಶರ್ಮಾ ಎಂಬ ಸ್ನೇಹಿತನನ್ನು ಏರ್ ಪೋರ್ಟ್ ಗೆ ಡ್ರಾಪ್ ಮಾಡಲು ಬಂದಿದ್ದ ಮಹಿಳೆ ಟಿಕೆಟ್ ಇಲ್ಲದಿದ್ದರೆ ಟರ್ಮಿನಲ್ ಒಳ ಪ್ರವೇಶಿಸಲು ಬಿಡುವುದಿಲ್ಲ ಎಂದು ನಕಲಿ ಇ-ಟಿಕೆಟ್ ತಯಾರಿಸಿ ಟರ್ಮಿನಲ್ ಪ್ರವೇಶಿಸಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಏರ್ ಪೋರ್ಟ್ ಭದ್ರತಾ ಸಿಬ್ಬಂದಿ ಏರ್ ಲೈನ್ಸ್ ಸಿಬ್ಬಂದಿಯಿಂದ ಟಿಕೆಟ್ ಕ್ಯಾನ್ಸಲ್ ಮಾಡಿಸಿಕೊಂಡು ಬಂದರೆ ಮಾತ್ರ ಹೊರ ಬಿಡುತ್ತೇವೆ ಎಂದಿದ್ದಾರೆ. ಈ ವೇಳೆ ಮಹಿಳೆ ಇಂಡಿಗೋ ಏರ್ ಲೈನ್ಸ್ ಕಚೇರಿಗೆ ತೆರಳಿದ್ದಾಳೆ. ಈ ವೇಳೆ ಟಿಕೆಟ್ ಪರಿಶೀಲಿಸಿದಾಗ ನಕಲಿ ಟಿಕೆಟ್ ಅಂತಾ ಗೊತ್ತಾಗಿದೆ.

ಏರ್ ಲೈನ್ಸ್ ಸಿಬ್ಬಂದಿ ದೂರಿನ ಮೇರೆಗೆ ಮಹಿಳೆಯನ್ನು ವಿಮಾನ ನಿಲ್ದಾಣ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅಕ್ರಮವಾಗಿ ಟರ್ಮಿನಲ್ ಪ್ರವೇಶಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular