HomeKarnatakaಬೀದಿ ವ್ಯಾಪಾರಿಗಳ ಬೆದರಿಸಿ ಸುಲಿಗೆ ಮಾಡುತ್ತಿದ್ದ ನಕಲಿ ಲೇಡಿ ಪೊಲೀಸ್ ಅರೆಸ್ಟ್

ಬೀದಿ ವ್ಯಾಪಾರಿಗಳ ಬೆದರಿಸಿ ಸುಲಿಗೆ ಮಾಡುತ್ತಿದ್ದ ನಕಲಿ ಲೇಡಿ ಪೊಲೀಸ್ ಅರೆಸ್ಟ್

ಬೆಂಗಳೂರು: ಪೋಲಿಸ್ ಎಂದು ಹೇಳಿಕೊಂಡು ವ್ಯಾಪಾರಿಗಳನ್ನು ಬೆದರಿಸಿ ಬೋಂಡಾ, ಬಜ್ಜಿ, ತರಕಾರಿ, ಬಿರಿಯಾನಿ ತಿನ್ನುತ್ತಿದ್ದ ಮಹಿಳೆಯನ್ನು ಕೊಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

50 ವರ್ಷದ ಲೀಲಾವತಿ ಬಂಧಿತ ಆರೋಪಿ. ಬ್ಯಾಟರಾಯನಪುರ ಕೊಡುಗೆಹಳ್ಳಿಯ ಹಲವು ವ್ಯಾಪಾರಿಗಳು ಲೀಲಾವತಿ ಕಾಟಕ್ಕೆ ಬೇಸತ್ತಿದ್ದರು. ಬ್ಯಾಟರಾಯನಪುರದ ಅಯ್ಯಪ್ಪ ಸ್ವಾಮಿ ದೇವಾಲಯ ಬಳೆ ಶುಕ್ರವಾರ ಪುಕ್ಕಟೆಯಾಗಿ ಬಜ್ಜಿ ಪಾರ್ಸೆಲ್ ಕಟ್ಟಿಸಿಕೊಳ್ಳಲು ಬಂದಿದ್ದ ವೇಳೆ ವ್ಯಾಪಾರಿಗಳು ನೀಡಿದ ಮಾಹಿತಿ ಆಧರಿಸಿ ಲೀಲಾವತಿಯನ್ನು ಬಂಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳೆದ ಒಂದು ವರ್ಷದಿಂದ ವ್ಯಾಪಾರಿಗಳನ್ನು ಬೆದರಿಸುತ್ತಿದ್ದ ಲೀಲಾವತಿ ಕೊಡಿಗೆಹಳ್ಳಿ, ಬ್ಯಾಟರಾಯನಪುರದಲ್ಲಿ ಬಜ್ಜಿ, ಬೋಂಡಾ, ಗೋಬಿ, ಪಾನಿಪುರಿ, ಬಿರಿಯಾನಿ, ಬೇಕರಿ ಸೇರಿದಂತೆ ತಿನಿಸು ಮಾರಾಟ ಮಾಡುವ ವ್ಯಾಪಾರಿಗಳ ಬಳಿ ಪುಕ್ಕಟೆಯಾಗಿ ತಿಂದು ಪಾರ್ಸೆಲ್ ಕಟ್ಟಿಸಿಕೊಂಡು ಹೋಗುತ್ತಿದ್ದಳು.

ಆರೋಪಿ ವಿದ್ಯಾವಂತೆಯಾಗಿದ್ದು, ಕುಟುಂಬ ಆರ್ಥಿಕವಾಗಿ ಸದೃಢವಾಗಿದೆ. ಗಂಡ ಇಂಜಿನಿಯರ್ ಆಗಿದ್ದು, ಮಗಳು ವೈದ್ಯೆ, ಮಗ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದಾನೆ. ಹೀಗಿದ್ದರೂ ಒಂದು ವರ್ಷದಿಂದ ವ್ಯಾಪಾರಿಗಳನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದಳು. ವ್ಯಾಪಾರಿಯೊಬ್ಬರು ಪೊಲೀಸ್ ಸಹಾಯವಾಣಿಗೆ(112) ಕರೆ ಮಾಡಿ ಮಾಹಿತಿ ನೀಡಿದಾಗ ಸ್ಥಳಕ್ಕೆ ಬಂದ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಈ ವೇಳೆ ನಕಲಿ ಪೊಲೀಸ್ ಎನ್ನುವುದು ಗೊತ್ತಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular