HomeIndiaBIG NEWS: ಫೇಕ್ ಎನ್ ಸಿಸಿ ಕ್ಯಾಂಪ್ ಅತ್ಯಾಚಾರ ಪ್ರಕರಣ: ಪ್ರಮುಖ ಆರೋಪಿ ಆತ್ಮಹತ್ಯೆ

BIG NEWS: ಫೇಕ್ ಎನ್ ಸಿಸಿ ಕ್ಯಾಂಪ್ ಅತ್ಯಾಚಾರ ಪ್ರಕರಣ: ಪ್ರಮುಖ ಆರೋಪಿ ಆತ್ಮಹತ್ಯೆ

ಚೆನ್ನೈ: ನಕಲಿ ಎನ್ ಸಿಸಿ ಕ್ಯಾಂಪ್ ಏರ್ಪಡಿಸಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರವೆಸಗಿರುವ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ ಪ್ರಮುಖ ಆರೋಪಿ ಆತ್ಮಹತ್ಯೆಗೆ ಶರಾಅಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಆರೋಪಿ ಶಿವರಾಮನ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಂಧನಕ್ಕೆ ಕೆಲ ಸಮಯಕ್ಕೂ ಮೊದಲು ವಿಷ ಸೇವಿಸಿದ್ದ ಆರೋಪಿ ಶಿವರಾಮನ್ ಬಳಿಕ ಅಸ್ವಸ್ಥಗೊಂಡಿದ್ದ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಕೃಷ್ಣಗಿರಿಯಿಂದ ಸೇಲಂ ಆಸ್ಪತೆಗೆ ಸ್ಥಳಾಂತರಿದ್ಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಕೃಷ್ಣಗಿರಿಯ ಶಾಲೆಯೊಂದರಲ್ಲಿ ನಕಲಿ ಎನ್ ಸಿಸಿ ಶಿಬಿರವನ್ನು ಆಯೋಜಿಸಿ 13 ವರ್ಷದ ವಿದ್ಯಾರ್ಥಿನಿ ಸೇರಿದಂತೆ ಹಲವರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯವೆಸಗಿದ್ದ ಪ್ರಕರಣ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿತ್ತು. ಪ್ರಕರಣ ಸಂಬಂಧ ಶಾಲೆಯ ಪ್ರಾಂಶುಪಾಲ, ಇಬ್ಬರು ಶಿಕ್ಷಕರು ಸೇರಿದಂತೆ 11 ಜನರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ. ಆರೋಪಿಗಳು ಇದೇ ರೀತಿ ಬೇರೆ ಬೇರೆ ಶಾಲೆಗಳಲ್ಲಿಯೂ ನಕಲಿ ಶಿಬಿರ ಆಯೋಜಿಸಿದ್ದಾರೆ ಎಂಬ ಬಗ್ಗೆಯೂ ತನಿಖೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular