ಬೆಂಗಳೂರು: ಪೊಲೀಸ್ ಆಯುಕ್ತರನ್ನೂ ಬಿಡದ ಸೈಬರ್ ಖದೀಮರು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಹೆಸರಲ್ಲಿ ನಕಲಿ ಫೇಸ್ ಬುಕ್ ಅಕೌಂಟ್ ಓಪನ್ ಮಾಡಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರ ಹೆಸರಲ್ಲಿ ಹಿಂದಿ ಭಾಷೆಯಲ್ಲಿ ನಕಲಿ ಫೇಸ್ ಬುಕ್ ಅಕೌಂಟ್ ತೆರೆದಿರುವ ವಂಚಕರು, ಹಲವರಿಗೆ ರಿಕ್ವೆಸ್ಟ್ ಕಳುಹಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೊ ವೈರಲ್ ಆಗಿದೆ.
ಇತ್ತೀಚೆಗೆ ಕಮಿಷನರ್ ದಯಾನಂದ್ ಹೆಸರಲ್ಲಿ ನಕಲಿ ವಾಟ್ಸಾಪ್ ಖಾತೆ ತೆರೆದಿದ್ದ ಖದೀಮರು, ವಂಚನೆಗೆ ಮುಂದಾಗಿದ್ದರು. ಕಮಿಷನರ್ ಫೋಟೋವನ್ನು ವಾಟ್ಸಾಪ್ ಡಿಪಿಗೆ ಹಾಕಿದ್ದರು. ಅಲ್ಲದೇ ನಾನು ದಯಾನಂದ್, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಎಂದು ಹಲವರಿಗೆ ಮೆಸೇಜ್ ರವಾನಿಸಲಾಗಿತ್ತು. ಈ ಮೂಲಕ ಕಮಿಷನರ್ ಹೆಸರಲ್ಲಿ ಹಣ ವಸೂಲಿಗೆ ವಂಚಕರು ಯತ್ನಿಸಿದರು ಎಂಬ ಶಂಕೆ ವ್ಯಕ್ತವಾಗಿದೆ. ಸೈಬರ್ ಕ್ರೈಂ ಪೊಲೀಸರ ಗಮನಕ್ಕೆ ಬರುತ್ತಿದಂತೆ ವಾಟ್ಸಪ್ ಅಕೌಂಟ್ ಡಿ ಆಕ್ಟಿವೇಟ್ ಮಾಡಲಾಗಿತ್ತು. ಇದೀಗ ನಕಲಿ ಫೇಸ್ ಬುಕ್ ತೆರೆದು ರಿಕ್ವೆಸ್ಟ್ ಕಲುಹಿಸಿರುವ ಘಟನೆ ನಡೆದಿದೆ.