ದಾವಣಗೆರೆ : ದಾವಣಗೆರೆಯಲ್ಲಿ ಖೋಟಾ ನೋಟು ಜಾಲ ಪತ್ತೆಯಾಗಿದ್ದು, ನಾಲ್ವರನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕುಬೇರಪ್ಪ, ಸಂತೋಷ್ ಕುಮಾರ್, ವೀರೇಶ್, ಹನುಮಂತಪ್ಪ ಎಂದು ಗುರುತಿಸಲಾಗಿದೆ. ಬಂಧಿತರಿಂದ 1 ಬೈಕ್ ಹಾಗೂ ಖೋಟಾ ನೋಟು ವಶಕ್ಕೆ ಪಡೆಯಲಾಗಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿರಡೋಣಿ ಸಪ್ತಗಿರಿ ಬಾರ್ & ರೆಸ್ಟೋರೆಂಟ್ ನಲ್ಲಿ ಖೋಟಾ ನೋಟು ಚಲಾವಣೆಯಾಗುತ್ತಿತ್ತು. ಬಾರ್ & ರೆಸ್ಟೋರೆಂಟ್ ಸೇರಿದಂತೆ ಹಲವು ಕಡೆ ಖೋಟಾ ನೋಟು ವಿತರಿಸಲಾಗುತ್ತಿತ್ತು. ಜೈಲಿನಿಂದ ರಿಲೀಸ್ ಆಗಿದ್ದ ಆರೋಪಿ ಕುಬೇರಪ್ಪ ಎಂಬಾತ ಈ ದಂಧೆ ನಡೆಸುತ್ತಿದ್ದನು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಹರಿಹರ, ಹೊಸಪೇಟೆ ಸೇರಿದಂತೆ ಹಲವು ಕಡೆಗೆ ಇಲ್ಲಿಂದ ಖೋಟಾ ನೋಟು ಸಪ್ಲೈ ಆಗುತ್ತಿತ್ತು ಎನ್ನಲಾಗಿದೆ.
You Might Also Like
TAGGED:ಖೋಟಾ ನೋಟು ಜಾಲ