HomeLatest NewsFactcheck: ಮೋದಿಯಿಂದ ಚಾಕೋಲೇಟ್ ಸ್ವೀಕರಿಸಿದ್ದಕ್ಕೆ ವಿಶ್ವವ್ಯಾಪಿ ಹೀನಾಯ ಟ್ರೋಲ್; ಅಸಹ್ಯಪಟ್ಟು ಮೋದಿ ಅನ್‌ಫಾಲೊ ಮಾಡಿದ ಮೆಲೊನಿ!

Factcheck: ಮೋದಿಯಿಂದ ಚಾಕೋಲೇಟ್ ಸ್ವೀಕರಿಸಿದ್ದಕ್ಕೆ ವಿಶ್ವವ್ಯಾಪಿ ಹೀನಾಯ ಟ್ರೋಲ್; ಅಸಹ್ಯಪಟ್ಟು ಮೋದಿ ಅನ್‌ಫಾಲೊ ಮಾಡಿದ ಮೆಲೊನಿ!

ಇತ್ತೀಚೆಗಷ್ಟೆ ವಿದೇಶ ಪ್ರವಾಸ ಕೈಗೊಂಡಿದ್ದ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಟಲಿಗೆ ಭೇಟಿ ನೀಡಿದ್ದರು. ಈ ವೇಳೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ಭೇಟಿ ಮಾಡಿದ ಮೋದಿ ಅವರ ಜತೆ ಇಟಲಿ ಕೆಲ ಪ್ರದೇಶಗಳಿಗೆ ಭೇಟಿ ನೀಡಿ ಫೋಟೊ ಕ್ಲಿಕ್ಕಿಸಿಕೊಂಡು ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು.

ಪ್ರಸಿದ್ಧ ನಾಯಕರು ಏನೇ ಮಾಡಿದರೂ ಖ್ಯಾತಿಯ ಜತೆಗೆ ಟೀಕೆಗಳೂ ಸಹ ಸಹಜ ಎಂಬಂತೆ ಮೋದಿಗೂ ಸಹ ಆನ್‌ಲೈನ್‌ನಲ್ಲಿ ಟ್ರೋಲ್ ಇದ್ದೇ ಇದೆ. ಮೋದಿ ಪ್ರತಿ ಬಾರಿ ವಿದೇಶಿ ಪ್ರವಾಸ ಕೈಗೊಂಡಾಗ ದೇಶದಲ್ಲಿನ ಸಮಸ್ಯೆಗಳನ್ನು ಉಲ್ಲೇಖಿಸಿ ಇದನ್ನೆಲ್ಲ ಬಿಟ್ಟು ಪ್ರವಾಸ ಮಾಡುವ ಅಗತ್ಯವಿದೆಯಾ ಎಂದು ಕಾಲೆಳೆಯುವ ನೆಟ್ಟಿಗರು ಈ ಬಾರಿಯೂ ಸಹ ಮಣಿಪುರ ಹಿಂಸಾಚಾರ, ನೀಟ್ ಪರೀಕ್ಷೆ ಪೇಪರ್ ಲೀಕ್, ಬಂಗಾಳ ಹಿಂಸಾಚಾರ, ಪೆಟ್ರೋಲ್ – ಡೀಸೆಲ್ ದರ ಏರಿಕೆ ವಿಚಾರವನ್ನು ಉಲ್ಲೇಖಿಸಿ ಟ್ರೋಲ್ ಮಾಡಿದರು.

ಅದರಲ್ಲೂ ಮೋದಿ ಜಾರ್ಜಿಯಾ ಮೆಲೋನಿಗೆ ಭಾರತದಿಂದ ‘ಮೆಲೋಡಿ’ ಚಾಕೋಲೇಟ್ ಕೊಂಡೊಯ್ದು ಗಿಫ್ಟ್ ನೀಡಿ ಅದರ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ದೊಡ್ಡ ಮಟ್ಟದಲ್ಲಿ ಟ್ರೋಲ್ ಆಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೇಶದ ರೂಪಾಯಿ ಮೌಲ್ಯ ಕುಸಿದಾಗ, ಉತ್ಪನ್ನಗಳ ಬೆಲೆ ಗಗನ ಮುಟ್ಟುತ್ತಿದ್ದಾಗ, ಜನ ಸಾಯುತ್ತಿದ್ದಾಗ, ಕೋಮು ಗಲಭೆ ಮುಗಿಲು ಮುಟ್ಟಿರುವಾಗ ಹೀಗೆ ಚಾಕೋಲೇಟ್ ನೀಡಿ ಶೋಕಿ ಮಾಡುವ ಅಗತ್ಯವಿದೆಯಾ ಎಂದು ಹಲವರು ಬರೆದುಕೊಂಡು ಮೆಲೋನಿಯನ್ನೂ ಸಹ ಉಲ್ಲೇಖಿಸಿದ್ದರು.

ಅಲ್ಲದೇ ಮೋದಿ ಮೆಲೋನಿ ಇಟಲಿ ಚಾಕೋಲೇಟ್‌ನ ಸ್ವಾದದ ಬಗ್ಗೆ ನನ್ನ ಬಳಿ ಹೇಳಿದ್ದರು, ಹಾಗಾಗಿ ನಾನು ಭಾರತದ ಚಾಕೋಲೇಟ್ ಬಗ್ಗೆ ಅವರ ಬಳಿ ಹೇಳಿದೆ, ಅದರ ಹಿಂದೆ ದೇಶದ ರೈತರ ಶ್ರಮವಿದೆ, ಒಂದೊಂದೂ ಚಾಕೋಲೇಟ್ ಸ್ವಾದದ ಹಿಂದೆ ರೈತನ ಬೆವರಿದೆ ಎಂದು ತಿಳಿಸಿದ್ದೆ ಎಂದು ಭಾರತದ ರೈತರ ಶ್ರಮವನ್ನು ಉಲ್ಲೇಖಿಸಿ ಚಾಕೋಲೇಟ್ ನೀಡಿದ್ದೇಕೆ ಎಂದು ತಿಳಿಸಿದ್ದರು.

ಇವೆಲ್ಲ ಬೆಳವಣಿಗೆಗಳು ಮೆಲೋನಿಗೆ ಇರಿಸು ಮುರಿಸು ಉಂಟಾಗುವಂತೆ ಮಾಡಿದ್ದು, ಮೆಲೋನಿ ನರೇಂದ್ರ ಮೋದಿ ಅವರನ್ನು ಇನ್ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೊ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಹಲವಾರು ಮೀಮ್ ಹಾಗೂ ಟ್ರೋಲ್‌ಗಳು ಹರಿದಾಡುತ್ತಿವೆ. ಆದರೆ ಅಸಲಿಯತ್ತಿಗೆ ಮೆಲೋನಿ ಇನ್ಸ್ಟಾಗ್ರಾಮ್‌ನಲ್ಲಿ ಮೋದಿಯನ್ನು ಹಿಂದೆ ಎಂದೂ ಫಾಲೋ ಮಾಡಿಯೇ ಇಲ್ಲ . ಹೀಗಾಗಿ ಅನ್‌ಫಾಲೊ ಮಾಡಿದ್ದಾರೆ ಎನ್ನುವುದು ವದಂತಿಯಷ್ಟೇ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular