HomeIndiaಮಹಿಳೆಯರಿಗೆ ಮಾಸಿಕ 5,100 ರೂ. ನೀಡುತ್ತಿದೆಯೇ ಕೇಂದ್ರ ಸರ್ಕಾರ ? ಇಲ್ಲಿದೆ ವದಂತಿ ಹಿಂದಿನ ಅಸಲಿ...

ಮಹಿಳೆಯರಿಗೆ ಮಾಸಿಕ 5,100 ರೂ. ನೀಡುತ್ತಿದೆಯೇ ಕೇಂದ್ರ ಸರ್ಕಾರ ? ಇಲ್ಲಿದೆ ವದಂತಿ ಹಿಂದಿನ ಅಸಲಿ ಸತ್ಯ

ಕೇಂದ್ರ ಸರ್ಕಾರವು ’ಶ್ರಮಿಕ ಸಮ್ಮಾನ್ ಯೋಜನೆ’ ಅಡಿ ಪ್ರತಿ ತಿಂಗಳು ಮಹಿಳೆಯರಿಗೆ 5,100ರೂ. ಗಳ ಸಹಾಯ ಧನ ನೀಡುವುದಾಗಿ ಸುಳ್ಳು ಸುದ್ದಿಯೊಂದನ್ನು ’ನೀತಿ ಗ್ಯಾನ್ 4 ಯೂ’ ಹೆಸರಿನ ಯೂಟ್ಯೂಬ್ ಚಾನೆಲ್‌ ಒಂದರಲ್ಲಿ ಹಬ್ಬಿಸಲಾಗಿದೆ.

ಇದೀಗ ಈ ವಿಚಾರವಾಗಿ ಖುದ್ದು ಸರ್ಕಾರ ಸ್ಪಷ್ಟನೆ ಕೊಟ್ಟಿದ್ದು, ಇದೊಂದು ವದಂತಿ ಎಂದಿದೆ. ಪಿಐಬಿಯ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಈ ವಿಚಾರವಾಗಿ ಅಲರ್ಟ್ ಪೋಸ್ಟ್ ಹಾಕಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಸುದ್ದಿ ಸುಳ್ಳಾಗಿದ್ದು, ’ಶ್ರಮಿಕ ಸಮ್ಮಾನ್’ ಹೆಸರಿನ ಯಾವ ಯೋಜನೆಯನ್ನೂ ಭಾರತ ಸರ್ಕಾರ ನಡೆಸುತ್ತಿಲ್ಲ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular