FACT CHECK: ಬ್ಯಾಂಕ್​ಗಳ ಖಾಸಗೀಕರಣ ಪಟ್ಟಿಯನ್ನು ನೀತಿ ಆಯೋಗ ಬಿಡುಗಡೆ ಮಾಡಿದೆಯೆ ? ಇಲ್ಲಿದೆ ಸತ್ಯ

ನವದೆಹಲಿ: ಖಾಸಗೀಕರಣವಾಗುತ್ತಿರುವ ಸಾರ್ವಜನಿಕ ಬ್ಯಾಂಕ್‌ಗಳ ಪಟ್ಟಿಯನ್ನು ನೀತಿ ಆಯೋಗ ಬಿಡುಗಡೆ ಮಾಡಿದೆ ಎಂದು ಭಾರಿ ಸುದ್ದಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ.

ಆದರೆ ಅಸಲಿಗೆ ಇದು ಸುಳ್ಳು ಸುದ್ದಿ. ಇಂಥ ಯಾವುದೇ ಪಟ್ಟಿಯನ್ನು ನೀತಿ ಆಯೋಗವು ಬಿಡುಗಡೆ ಮಾಡಿಲ್ಲ ಎಂದು ಪ್ರೆಸ್​ ಇನ್​ಫಾರ್ಮೇಷನ್​ ಬ್ಯೂರೋ ಸ್ಪಷ್ಟಪಡಿಸಿದೆ.

ಮಾಧ್ಯಮ ವರದಿಗಳಲ್ಲಿ ಉಲ್ಲೇಖಿಸಿರುವಂತಹ ಯಾವುದೇ ಪಟ್ಟಿಯನ್ನು ನೀತಿ ಆಯೋಗ ಯಾವುದೇ ರೂಪದಲ್ಲಿ ಹಂಚಿಕೊಂಡಿಲ್ಲ ಎಂದು ಅದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಜೊತೆಗೆ ಈ ಕುರಿತು ತನ್ನ ಟ್ವಿಟರ್​ ಖಾತೆಯಲ್ಲಿಯೂ ಶೇರ್​ ಮಾಡಿಕೊಂಡಿದೆ.

ಕೆಲವೊಂದು ಖಾಸಗಿ ಬ್ಯಾಂಕ್​ಗಳನ್ನು ಹೆಸರಿಸಿ ಈ ಬ್ಯಾಂಕ್​ಗಳು ಖಾಸಗೀಕರಣಗೊಳ್ಳುತ್ತಿದೆ ಎಂದೂ, ಮುಂದೆ ಖಾಸಗೀಕರಣ ಆಗಬಹುದಾದ ಬ್ಯಾಂಕ್​ಗಳ ಪಟ್ಟಿಯನ್ನು ನೀತಿ ಆಯೋಗ ಬಿಡುಗಡೆ ಮಾಡಿದೆ ಎಂಬ ಸುದ್ದಿ ಹರಿದಾಡುತ್ತಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read