HomeHealthಯುವಜನತೆಯಲ್ಲಿ ಹೆಚ್ಚುತ್ತಿದೆ ಫ್ಯಾಟಿ ಲಿವರ್ ಸಮಸ್ಯೆ: ಭಾರತೀಯರಲ್ಲಿ ಆತಂಕ ಹುಟ್ಟಿಸಿದ ಏಮ್ಸ್ ವರದಿ!

ಯುವಜನತೆಯಲ್ಲಿ ಹೆಚ್ಚುತ್ತಿದೆ ಫ್ಯಾಟಿ ಲಿವರ್ ಸಮಸ್ಯೆ: ಭಾರತೀಯರಲ್ಲಿ ಆತಂಕ ಹುಟ್ಟಿಸಿದ ಏಮ್ಸ್ ವರದಿ!

ಭಾರತದಲ್ಲಿ ಯಕೃತ್ತು ಹಾಗೂ ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಗಳು ವೇಗವಾಗಿ ಉಲ್ಬಣಗೊಳ್ಳುತ್ತಿದ್ದು, ವಿಶೇಷವಾಗಿ ಫ್ಯಾಟಿ ಲಿವರ್ ಸಮಸ್ಯೆ ಮಹಾಮಾರಿ ರೂಪ ಪಡೆದುಕೊಳ್ಳುತ್ತಿದೆ. ದೇಶದ ಶೇಕಡಾ 38.6 ರಷ್ಟು ಯುವಕರಲ್ಲಿ ಹಾಗೂ ಶೇಕಡಾ 35.4 ರಷ್ಟು ಮಕ್ಕಳಲ್ಲಿ ಈ ಫ್ಯಾಟಿ ಲಿವರ್ ಅಂದರೆ ಯಕೃತ್ತಿನಲ್ಲಿ ಕೊಬ್ಬು ಶೇಖರಣೆಯಾಗುವ ಸಮಸ್ಯೆ ಕಂಡುಬಂದಿದೆ ಎಂದು ಇತ್ತೀಚಿನ ಅಧ್ಯಯನವೊಂದು ಬಹಿರಂಗಪಡಿಸಿದೆ. ಅಂದರೆ ಇಂದು ಪ್ರತಿ ಹತ್ತು ಯುವಕರಲ್ಲಿ ನಾಲ್ವರು ಹಾಗೂ ಪ್ರತಿ ಹತ್ತು ಮಕ್ಕಳಲ್ಲಿ ಮೂವರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ನವದೆಹಲಿಯ ಏಮ್ಸ್ ಸಂಸ್ಥೆಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಮುಖ್ಯಸ್ಥ ಡಾ. ಪ್ರಮೋದ್ ಗಾರ್ಗ್, ಭಾರತದಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಯಶಸ್ಸು ಸಿಕ್ಕಿದೆಯಾದರೂ ಮೆಟಬಾಲಿಕ್ ಅಂದರೆ ಚಯಾಪಚಯ ಕ್ರಿಯೆಗೆ ಸಂಬಂಧಿಸಿದ ರೋಗಗಳು ಹೆಚ್ಚುತ್ತಿವೆ ಎಂದಿದ್ದಾರೆ. ಜನರು ಈ ಸಮಸ್ಯೆಯನ್ನು ಕೇವಲ ಸಾಧಾರಣ ಬೊಜ್ಜು ಎಂದು ನಿರ್ಲಕ್ಷಿಸುವುದೇ ರೋಗ ಉಲ್ಬಣಗೊಳ್ಳಲು ಮುಖ್ಯ ಕಾರಣವಾಗಿದೆ. ಟೈಪ್ 2 ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಇರುವವರಲ್ಲಿ ಈ ಅಪಾಯ ಹೆಚ್ಚು. ಮಧುಮೇಹಿಗಳಲ್ಲಿ ಶೇಕಡಾ 9 ರಷ್ಟು ಜನರಿಗೆ ಲಿವರ್ ಫೈಬ್ರೋಸಿಸ್ ಅಂದರೆ ಯಕೃತ್ತಿನ ಗಂಭೀರ ಹಾನಿ ಕಂಡುಬಂದಿದೆ.

ಆರಂಭಿಕ ಹಂತದಲ್ಲೇ ಗುರುತಿಸಿದರೆ ಈ ಸಮಸ್ಯೆಗೆ ಸುಲಭವಾಗಿ ಚಿಕಿತ್ಸೆ ನೀಡಬಹುದು. ಮಲದಲ್ಲಿ ರಕ್ತ ಕಾಣಿಸಿಕೊಳ್ಳುವುದು, ಕರುಳಿನ ಚಲನೆಯಲ್ಲಿ ದಿಢೀರ್ ಬದಲಾವಣೆ, ನಿರಂತರ ಆಯಾಸ ಹಾಗೂ ಅಸ್ವಾಭಾವಿಕ ತೂಕ ನಷ್ಟದಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಏಮ್ಸ್ ಪ್ರೊಫೆಸರ್ ಡಾ. ಗೋವಿಂದ್ ಮಖಾರಿಯಾ ಪ್ರಕಾರ, ಈ ಮುಂಚೆ ಸೂಕ್ತ ತಂತ್ರಜ್ಞಾನದ ಕೊರತೆಯಿಂದ ಈ ಲಕ್ಷಣಗಳನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ, ಆದರೆ ಈಗ ಸಮಯಕ್ಕೆ ಸರಿಯಾದ ತಪಾಸಣೆ ಅತ್ಯಗತ್ಯವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular