HomeLatest NewsBREAKING : ಬೆಂಗಳೂರಿನ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳಿಗೆ ಇಟ್ಟಿದ್ದ ಸಿಡಿಮದ್ದು ಸ್ಫೋಟ : ಕುರಿಗಾಹಿ...

BREAKING : ಬೆಂಗಳೂರಿನ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳಿಗೆ ಇಟ್ಟಿದ್ದ ಸಿಡಿಮದ್ದು ಸ್ಫೋಟ : ಕುರಿಗಾಹಿ ಮಹಿಳೆಯ ಕೈ ಛಿದ್ರ ಛಿದ್ರ.!

ಬೆಂಗಳೂರು: ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳಿಗೆ ಇಟ್ಟಿದ್ದ ಸಿಡಿಮದ್ದು ಸ್ಫೋಟಗೊಂಡು ಕುರಿಗಾಹಿಮಹಿಳೆಯ ಕೈ ಬೆರಳು ಛಿದ್ರ ಛಿದ್ರವಾಗಿರುವ ಘಟನೆ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಗಮ್ಮನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಿಡಿಮದ್ದು ಸ್ಫೋಟಗೊಂಡು ಕುರಿಗಾಹಿ ಮಹಿಳೆ ರಂಗಮ್ಮ (50) ಎಂಬುವವರು ಗಂಭೀರವಾಗಿ ಗಾಯಗೊಂಡಿದಾರೆ.

ಕಾಡುಹಂದಿ, ಇತರೆ ಪ್ರಾಣಿಗಳು ಹೊಲಕ್ಕೆ ಬಾರದಂತೆ ಸಿಡಿಮದ್ದು ಇಡಲಾಗಿತ್ತು. ಮೇಕೆಗೆ ಸಿಡಿಮದ್ದಿನ ವೈರ್ ಸುತ್ತಿಕೊಂಡಿತ್ತು. ವೈರ್ ತೆಗೆದು ಮೇಕೆ ರಕ್ಷಿಸಲು ಹೋಗಿ ರಂಗಮ್ಮ ಗಾಯಗೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular