ಇಂದು ( ಏಪ್ರಿಲ್ 29 ) ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಮುಕ್ತಾಯವಾಗಿದ್ದು, 91.41% ಮತದಾನ ನಡೆದಿದೆ.
ಹೀಗೆ ಮತದಾನ ಮುಕ್ತಾಯವಾಗುತ್ತಿದ್ದಂತೆ ಎಕ್ಸಿಟ್ ಪೋಲ್ ಪ್ರಕಟ ಮಾಡಲು ಅನುಮತಿ ದೊರಕಿದ್ದು, ವಿವಿಧ ಸಂಸ್ಥೆಗಳು ತಮಿಳುನಾಡು, ಕೇರಳ, ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಪುದುಚೆರಿ ವಿಧಾನಸಭೆಗಳ ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಕಟಿಸಿವೆ.
ಪಶ್ವಿಮ ಬಂಗಾಳ ಚುನಾವಣೋತ್ತರ ಸಮೀಕ್ಷೆಗಳ ಪೈಕಿ ಬಹುತೇಕ ಎಲ್ಲ ಸಮೀಕ್ಷೆಗಳೂ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದಿವೆ. 294 ಕ್ಷೇತ್ರಗಳಿರುವ 148 ಸೀಟುಗಳನ್ನು ಗೆದ್ದ ಪಕ್ಷ ಅಧಿಕಾರಕ್ಕೆ ಬರಲಿದೆ.
ಮ್ಯಾಟ್ರಿಜ್: ಟಿಎಂಸಿ 125ರಿಂದ 140, ಬಿಜೆಪಿ 146ರಿಂದ 161 ಹಾಗೂ ಇತರೆ 6ರಿಂದ 10 ಸೀಟುಗಳನ್ನು ಗೆಲ್ಲಲಿದೆ ಎಂದು ಪ್ರಕಟಿಸಿದೆ.
ಪಿ ಮಾರ್ಕ್: ಟಿಎಂಸಿ 118ರಿಂದ 138, ಬಿಜೆಪಿ 150ರಿಂದ 175 ಹಾಗೂ ಇತರೆ 2ರಿಂದ 6 ಸೀಟುಗಳನ್ನು ಗೆಲ್ಲಲಿದೆ ಎಂದು ಪ್ರಕಟಿಸಿದೆ.
ಪೋಲ್ ಡೈರಿ: ಟಿಎಂಸಿ 99ರಿಂದ 127, ಬಿಜೆಪಿ 142ರಿಂದ 171, ಲೆಫ್ಟ್ ಫ್ರಂಟ್ 2ರಿಂದ 3, ಕಾಂಗ್ರೆಸ್ 3ರಿಂದ 5 ಹಾಗೂ ಇತರೆ 2ರಿಂದ 6 ಸೀಟುಗಳನ್ನು ಗೆಲ್ಲಲಿದೆ ಎಂದು ಪ್ರಕಟಿಸಿದೆ.
ಜೆವಿಸಿ: ಟಿಎಂಸಿ 131ರಿಂದ 152, ಬಿಜೆಪಿ 138ರಿಂದ 159 ಹಾಗೂ ಇತರೆ 0ರಿಂದ 2 ಸೀಟುಗಳನ್ನು ಗೆಲ್ಲಲಿದೆ ಎಂದು ಪ್ರಕಟಿಸಿದೆ.

