HomeEntertainment’ಮೈ ಅಟಲ್ ಹೂಂ’ ಚಿತ್ರದಲ್ಲಿ ವಾಜಪೇಯಿ ಗೆಟಪ್‌ನಲ್ಲಿ ಮಿಂಚುತ್ತಿರುವ ಪಂಕಜ್ ತ್ರಿಪಾಠಿ

’ಮೈ ಅಟಲ್ ಹೂಂ’ ಚಿತ್ರದಲ್ಲಿ ವಾಜಪೇಯಿ ಗೆಟಪ್‌ನಲ್ಲಿ ಮಿಂಚುತ್ತಿರುವ ಪಂಕಜ್ ತ್ರಿಪಾಠಿ

’ಮೈ ಅಟಲ್ ಹೂಂ’ ಚಿತ್ರದ ಟೀಸರ್‌ಗಳ ಮೂಲಕ ತಮ್ಮ ಮುಂಬರುವ ಪ್ರಾಜೆಕ್ಟ್‌ ಬಗ್ಗೆ ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಕೆರಳಿಸಿದ ನಟ ಪಂಕಜ್‌ ತ್ರಿಪಾಠಿ ಇದೀಗ ಶೂಟಿಂಗ್ ಸೆಟ್‌ನಲ್ಲಿನ ಚಿತ್ರವೊಂದನ್ನು ಮಾಧ್ಯಮಗಳಿಗೆ ಶೇ‌ರ್‌ ಮಾಡಿಕೊಂಡಿದ್ದಾರೆ.

ಚಿತ್ರದ ಭಾಗವೊಂದರ ಚಿತ್ರೀಕರಣಕ್ಕೆಂದು ಫಾರ್ಮಲ್ ಶರ್ಟ್ ಹಾಗೂ ಪ್ಯಾಂಟ್‌ನಲ್ಲಿದ್ದ ತ್ರಿಪಾಠಿ, ಕ್ಲೀನ್ ಶೇವ್‌ ಹಾಗೂ ಬಾಚಿದ ತಲೆಯೊಂದಿಗೆ ತಮ್ಮ ವ್ಯಾನಿಟಿಗೆ ತೆರಳುವವರಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಡಿಸೆಂಬರ್‌ 2022ರಲ್ಲಿ ಚಿತ್ರದ ಪೋಸ್ಟರ್‌ ಸರಣಿಯನ್ನು ಹಂಚಿಕೊಳ್ಳುವ ಮೂಲಕ ತಮ್ಮ ಹೊಸ ಪ್ರಾಜೆಕ್ಟ್ ಕುರಿತು ಘೋಷಣೆ ಮಾಡಿದ್ದರು ಪಂಕಜ್.

“ಇಂಥ ಮಾನವೀಯ ರಾಜಕಾರಣಿಯ ಪಾತ್ರ ನಿರ್ವಹಿಸುವುದು ಒಂದು ಗೌರವವಿದ್ದಂತೆ. ಅವರು ಬರೀ ರಾಜಕಾರಣಿ ಮಾತ್ರವಲ್ಲ, ಒಳ್ಳೆಯ ಬರಹಗಾರ ಹಾಗೂ ಕವಿ ಸಹ ಆಗಿದ್ದರು. ಅಟಲ್‌ಜೀಯವರ ವ್ಯಕ್ತಿತ್ವಕ್ಕೆ ನನ್ನನ್ನು ತಂದುಕೊಳ್ಳಲು ಬಹಳ ಶ್ರಮ ಹಾಕಬೇಕೆಂದು ನನಗೆ ಗೊತ್ತಿತ್ತು. ನನ್ನ ಹೊಸ ಪಾತ್ರಕ್ಕೆ ನನ್ನ ಉತ್ಸಾಹ ಹಾಗೂ ಬದ್ಧತೆಗಳಿಂದ ಜೀವ ತುಂಬುವ ನಿರೀಕ್ಷೆ ನನ್ನದು,” ಎಂದು ಪಂಕಜ್ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular