ಆರೋಗ್ಯಕ್ಕೆ ಅಪಾಯಕಾರಿ ಅತಿಯಾದ ಐಸ್‌ಕ್ರೀಂ ಸೇವನೆ, ಮಕ್ಕಳಲ್ಲಿ ಐಸ್‌ಕ್ರೀಂ ಚಟ ಬಿಡಿಸಲು ಇಲ್ಲಿದೆ ಟಿಪ್ಸ್‌

ಬೇಸಿಗೆ ಬಂತೆಂದರೆ ಜನರು ತಂಪು ಆಹಾರ ತಿನ್ನಲು ಶುರು ಮಾಡುತ್ತಾರೆ. ಇವುಗಳಲ್ಲಿ ಅತ್ಯಂತ ಪ್ರಿಯವಾದದ್ದು ಐಸ್ ಕ್ರೀಮ್. ಮಕ್ಕಳಿರಲಿ ದೊಡ್ಡವರಿರಲಿ ಎಲ್ಲರೂ ಐಸ್ ಕ್ರೀಂ ಇಷ್ಟಪಡುತ್ತಾರೆ. ಆತಂಕದ ವಿಷಯ ಏನೆಂದರೆ ಚಿಕ್ಕ ಮಕ್ಕಳು ದಿನನಿತ್ಯ ಐಸ್ ಕ್ರೀಂ ಸೇವಿಸಿದಾಗ ಸಮಸ್ಯೆಗಳಾಗುತ್ತವೆ.

ಸಣ್ಣ ಮಕ್ಕಳಿಗೆ ಐಸ್ ಕ್ರೀಮ್ ಅಪಾಯಕಾರಿ. ಐಸ್ ಕ್ರೀಮ್ ಚಟದಿಂದ ಅವರನ್ನು ಹೊರತರುವುದು ಬಹಳ ಕಷ್ಟ. ಕೆಲವು ಸುಲಭವಾದ ವಿಧಾನಗಳ ಮೂಲಕ ಮಕ್ಕಳ ಐಸ್‌ಕ್ರೀಂ ಕ್ರೇವಿಂಗ್ಸ್‌ ಅನ್ನು ಕಡಿಮೆ ಮಾಡಬಹುದು.

ಮಕ್ಕಳಿಗೆ ಐಸ್ ಕ್ರೀಂ ತಿನ್ನಬೇಕೆಂದ ಅನಿಸಿದಾಗಲೆಲ್ಲ ಮೊಸರು, ಸ್ಮೂಥಿ, ಹಣ್ಣುಗಳಂತಹ ವಸ್ತುಗಳನ್ನು ಅವರ ಮುಂದೆ ಇಡಬೇಕು. ಅಪ್ಪಿತಪ್ಪಿಯೂ ಮನೆಯಲ್ಲಿ ಐಸ್ ಕ್ರೀಮ್ ಇಡಬೇಡಿ. ಇದಲ್ಲದೇ ಮಕ್ಕಳು ಹಣ ಕೇಳಿದರೆ ಕೊಡಬೇಡಿ, ಬದಲಿಗೆ ಮನೆಯಲ್ಲಿ ಇಟ್ಟಿರುವ ಹಣ್ಣು ಅಥವಾ ಡ್ರೈ ಫ್ರೂಟ್ಸ್ ಕೊಡಬಹುದು.

ಈ ಸಲಹೆಗಳನ್ನು ಅಳವಡಿಸಿಕೊಂಡರೆ ಮಕ್ಕಳನ್ನು ಐಸ್ ಕ್ರೀಂ ಚಟದಿಂದ ಮುಕ್ತಗೊಳಿಸಬಹುದು. ಮಕ್ಕಳಿಗೆ ಐಸ್ ಕ್ರೀಂನಿಂದ ಯಾವುದೇ ಸಮಸ್ಯೆ ಅಥವಾ ಅಲರ್ಜಿ ಇದ್ದರೆ ವೈದ್ಯರನ್ನು ಸಂಪರ್ಕಿಸಿ.

ಐಸ್ ಕ್ರೀಮ್ ಮಕ್ಕಳಿಗೆ ಅಪಾಯಕಾರಿ!

ಐಸ್ ಕ್ರೀಮ್ ಸೇವನೆಯು ಮಕ್ಕಳಿಗೆ ತುಂಬಾ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿರುವ ಸಕ್ಕರೆಯು ಮಕ್ಕಳ ಹಲ್ಲುಗಳನ್ನು ಕೆಡಿಸಬಹುದು. ಐಸ್‌ಕ್ರೀಮ್‌ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತದೆ, ಇದರಿಂದಾಗಿ ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲೇ ಬೊಜ್ಜು ಕಾಣಿಸಿಕೊಳ್ಳಬಹುದು. ಪ್ರತಿನಿತ್ಯ ಐಸ್ ಕ್ರೀಂ ಸೇವನೆ ಮಾಡುವುದರಿಂದ ನೆಗಡಿ, ಕೆಮ್ಮು ಮುಂತಾದ ಸಮಸ್ಯೆಗಳೂ ಬರಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read