HomeKarnatakaಡಿ.ಇಎಲ್.ಇಡಿ. ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟ

ಡಿ.ಇಎಲ್.ಇಡಿ. ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟ

ಬೆಂಗಳೂರು: 2023-24ನೇ ಸಾಲಿನಲ್ಲಿ ನಡೆದ ಡಿ.ಇಎಲ್.ಇಡಿ. ಮುಖ್ಯ ಪರೀಕ್ಷೆಯ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಿಸಿದೆ.

ಮಂಡಳಿಯ ಅಂತರ್ಜಾಲ https://kseab.karnataka.gov.in ದಲ್ಲಿ ಫಲಿತಾಂಶ ಪ್ರಕಟಿಸಿದ್ದು, ಹಾಗೂ ಸಂಸ್ಥೆಗಳ ಫಲಿತಾಂಶ ಪಟ್ಟಿಯನ್ನು ಸಂಬಂಧಿಸಿದ ಸಂಸ್ಥೆಯ ಲಾಗಿನ್‌ನಲ್ಲಿ ಲಭ್ಯ ಮಾಡಲಾಗುವುದು.

ಫಲಿತಾಂಶ ಪ್ರಕಟಣೆಯಾದ 15 ದಿನಗಳೊಳಗೆ ಫಲಿತಾಂಶ ತಿದ್ದುಪಡಿ ಇದ್ದಲ್ಲಿ ನಿಯಮಾನುಸಾರ ತಿದ್ದುಪಡಿ ಮಾಡಲಾಗುವುದು. ವಿಶೇಷ ಪರಿಸ್ಥಿತಿಯಲ್ಲಿ ಅಂದರೆ ಪರೀಕ್ಷೆಯ ದುರಾಚರಣೆ, ವಂಚನೆ, ಅನುಚಿತ ವರ್ತನೆ ಮೊದಲಾದವುಗಳಿಂದ ಪ್ರಭಾವಿತವಾಗಿದೆ ಎಂದು ಕಂಡುಬಂದಲ್ಲಿ ಅಂತಹ ಫಲಿತಾಂಶವನ್ನು ಫಲಿತಾಂಶ ಪ್ರಕಟವಾದ ನಂತರವೂ ನಿಯಮಾನುಸಾರ ಪರೀಕ್ಷಾ ಫಲಿತಾಂಶವನ್ನು ತಡೆಹಿಡಿಯುವ, ರದ್ದುಪಡಿಸುವ, ಮಾರ್ಪಡಿಸಿ ಪ್ರಕಟಿಸುವ ಅಧಿಕಾರವನ್ನು ಮಂಡಳಿ ಹೊಂದಿರುತ್ತದೆ ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular