ನಿನ್ನೆ ಬಳ್ಳಾರಿಯಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ್ದ ದರ್ಶನ್ ಅಭಿಮಾನಿ, ಅವರನ್ನು ಬಳ್ಳಾರಿ ಜೈಲಿಗೆ ಹಾಕಬಾರದಿತ್ತು, ಬಳ್ಳಾರಿ ಜೈಲಿನಲ್ಲಿ ಊಟ, ಸಾಂಬಾರು ಚೆನ್ನಾಗಿಲ್ಲ, ನಾನು ಈ ಜೈಲಿನಲ್ಲಿ ಆರು ವರ್ಷ ಕೈದಿಯಾಗಿದ್ದೆ ಎಂದಿದ್ದಾನೆ.
‘ಹಣ ಕೊಟ್ರೆ ಬಳ್ಳಾರಿ ಜೈಲಲ್ಲೂ ಎಲ್ಲ ಸಿಗುತ್ತೆ’ ಎಂದ ಮಾಜಿ ಕೈದಿಗೆ ಸಂಕಷ್ಟ ಎದುರಾಗಿದ್ದು, ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ನಾವು ದರ್ಶನ್ ಅಭಿಮಾನಿಗಳು, ಅವರನ್ನು ಬೇರೆ ಜೈಲಿಗೆ ಹಾಕಬಹುದಾಗಿತ್ತು. ಬಳ್ಳಾರಿ ಜೈಲಿನಲ್ಲಿ ಊಟ, ಸಾಂಬಾರು ಚೆನ್ನಾಗಿಲ್ಲ, ಏನೂ ಚೆನ್ನಾಗಿಲ್ಲ ಎಂದಿದ್ದಾನೆ.
ಜೈಲಿನಲ್ಲಿ ಗಾಂಜಾ, ಬೀಡಿ, ಸಿಗರೇಟು ಎಲ್ಲ ಸಿಗುತ್ತೆ, ಇದನ್ನು ಹೆಚ್ಚಿನ ಹಣಕ್ಕೆ ನೀಡಲಾಗುತ್ತದೆ. ಯಾವುದೇ ಭಯವಿಲ್ಲದೇ ಮಾತನಾಡಿದ ಮಾಜಿ ಕೈದಿಗೆ ಈಗ ಪೊಲೀಸರು ನೊಟೀಸ್ ಜಾರಿ ಮಾಡಿ ಜೈಲಾಧಿಕಾರಿಗಳನ್ನು ಭೇಟಿ ಮಾಡುವಂತೆ ಸೂಚಿಸಿದ್ದಾರೆ.
A fan of actor #Darshan who has lived in #BallariJail for six years
claims to have a supply of banned drugs and alcohol inside the prison in front of the media. States that the Sambar is not prepared well, reports @KiranTNIE1 @NewIndianXpress @XpressBengaluru @KannadaPrabha pic.twitter.com/Rkw31qOC3i— Amit Upadhye (@AmitSUpadhye) August 28, 2024

