HomeIndiaಪ್ರಾಣಿ ಪ್ರಪಂಚದಲ್ಲಿ ಪ್ರೀತಿ: ಹಸುವಿನಿಂದ ಮಮತೆ ಪಡೆದ ಚಿರತೆ | Viral Video

ಪ್ರಾಣಿ ಪ್ರಪಂಚದಲ್ಲಿ ಪ್ರೀತಿ: ಹಸುವಿನಿಂದ ಮಮತೆ ಪಡೆದ ಚಿರತೆ | Viral Video

ಪ್ರಾಣಿ ಪ್ರಪಂಚದಲ್ಲಿಯೂ ಪ್ರೀತಿ ಮತ್ತು ಬಾಂಧವ್ಯಕ್ಕೆ ಸ್ಥಾನವಿದೆ ಎಂಬುದನ್ನು ಸಾಬೀತುಪಡಿಸುವ ಅಪರೂಪದ ದೃಶ್ಯವೊಂದು ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಬೇಟೆಯಾಡುವ ಪ್ರಾಣಿಗಳಾದ ಚಿರತೆ ಮತ್ತು ಹಸು ಇಲ್ಲಿ ತಾಯಿ-ಮಗನಂತೆ ವರ್ತಿಸುತ್ತಿರುವುದು ಅಚ್ಚರಿ ಮೂಡಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ, ಚಿರತೆಯೊಂದು ಹಸುವಿನ ಬಳಿ ಬಂದು ಅದರ ಮೈದಡವಿ ಪ್ರೀತಿ ಪಡೆಯಲು ಯತ್ನಿಸುತ್ತದೆ. ಹಸುವೂ ಸಹ ಚಿರತೆಗೆ ಯಾವುದೇ ತೊಂದರೆ ಮಾಡದೆ, ಶಾಂತವಾಗಿ ಅದರ ಸ್ಪರ್ಶಕ್ಕೆ ಅವಕಾಶ ನೀಡುತ್ತದೆ. ಈ ದೃಶ್ಯವನ್ನು ಕಂಡ ಜನರು ಬೆರಗಾಗಿದ್ದಾರೆ.

ಕಾಡಿನಲ್ಲಿ ವಾಸಿಸುವ ವನ್ಯಜೀವಿಗಳು ಆಹಾರಕ್ಕಾಗಿ ಬೇಟೆಯಾಡುತ್ತವೆ. ಹುಲಿ, ಸಿಂಹ ಮತ್ತು ಚಿರತೆಗಳಂತಹ ಕ್ರೂರ ಪ್ರಾಣಿಗಳು ತಮ್ಮ ಬೇಟೆಯನ್ನು ಹಿಡಿಯಲು ಹೊಂಚು ಹಾಕಿ ಕುಳಿತಿರುತ್ತವೆ. ಈ ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ಪ್ರತಿಯೊಂದು ಪ್ರಾಣಿಯೂ ಪ್ರಯತ್ನಿಸುತ್ತದೆ. ಆದರೆ ಇಲ್ಲಿ ಹಸುವಿನಿಂದ ಪ್ರೀತಿ ಪಡೆಯುವ ಚಿರತೆಯ ವಿಡಿಯೋ ಎಲ್ಲರ ಗಮನ ಸೆಳೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular