’ಡಿಜಿಟಲ್ ಬರ್ತಡೇ ಕ್ಯಾಂಡಲ್‌’ ಆರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಬಾಲೆ

ಹುಟ್ಟುಹಬ್ಬಗಳ ಸಂದರ್ಭದಲ್ಲಿ ಕೇಕ್‌ಗಳ ಮೇಲೆ ಇಟ್ಟ ಮೇಣದ ಬತ್ತಿಯನ್ನು ಆರಿಸುವುದು ಸಾಮಾನ್ಯ. ಆದರೆ ಕೇಕ್ ಮೇಲೆ ಇಡಲು ಕ್ಯಾಂಡಲ್ ಇಲ್ಲವಾದಲ್ಲಿ ಏನು ಮಾಡುವುದು ?

ಹತ್ತಿರದ ಅಂಗಡಿಗೆ ಓಡಿ ಹೋಗಿ ಒಂದು ಕ್ಯಾಂಡಲ್ ತರುವುದು ಎಂಬ ಸಿದ್ಧ ಉತ್ತರ ಸಿಗುತ್ತದೆ ಅಲ್ಲವೇ ? ಆದರೆ ಸ್ನೇಹಿತರ ಗುಂಪೊಂದು ವಿಶಿಷ್ಟವಾದ ರೀತಿಯಲ್ಲಿ ಕ್ಯಾಂಡಲ್ ಆರಿಸುವ ಮೂಲಕ ತಮ್ಮ ಗೆಳತಿಯ ಹುಟ್ಟುಹಬ್ಬ ಆಚರಿಸಿದೆ.

ಡಿಜಿಟಲ್ ತಂತ್ರಜ್ಞಾನವನ್ನು ಹುಟ್ಟುಹಬ್ಬದ ಆಚರಣೆಗೂ ವಿಸ್ತರಿಸಿದ ಗೆಳೆಯರ ಈ ಗುಂಪು, ತಮ್ಮ ಸ್ನೇಹಿತೆಗೆ ’ಡಿಜಿಟಲ್ ಕ್ಯಾಂಡಲ್’ ಆರಿಸಿ ಕೇಕ್ ಕತ್ತರಿಸುವಂತೆ ಮಾಡಿದ್ದಾರೆ.

ಸ್ಮಾರ್ಟ್‌ಫೋನ್‌ಗಳ ಫ್ಲಾಶ್‌ಲೈಟ್‌ಗಳನ್ನೇ ಹುಟ್ಟುಹಬ್ಬದ ಕ್ಯಾಂಡಲ್‌ ಅನ್ನಾಗಿ ಇಲ್ಲಿ ಬಳಸಲಾಗಿದೆ. ಅಪ್ಲೋಡ್ ಆದ ಘಳಿಗೆಯಿಂದಲೂ ಈ ರೀಲ್‌ಗೆ 12.5 ದಶಲಕ್ಷ ವೀಕ್ಷಣೆಗಳು ಸಿಕ್ಕಿವೆ.

https://youtu.be/PL0UBPKqGgM

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read