HomeBusinessಬೆಂಗಳೂರು ಜನತೆಗೆ ಗುಡ್ ನ್ಯೂಸ್: ಇದೇ ಮೊದಲ ಬಾರಿಗೆ ಸಂಜೆ ಅಂಚೆ ಕಚೇರಿ ಆರಂಭ

ಬೆಂಗಳೂರು ಜನತೆಗೆ ಗುಡ್ ನ್ಯೂಸ್: ಇದೇ ಮೊದಲ ಬಾರಿಗೆ ಸಂಜೆ ಅಂಚೆ ಕಚೇರಿ ಆರಂಭ

ಬೆಂಗಳೂರು: ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಸಂಜೆ ಅಂಚೆ ಕಚೇರಿ ಆರಂಭವಾಗಿದೆ. ರಾತ್ರಿ 9 ಗಂಟೆ ವರೆಗೆ ಆಧಾರ್ ತಿದ್ದುಪಡಿ ಸೇರಿದಂತೆ ಅಂಚೆ ಸೇವೆಗಳು ಲಭ್ಯ ಇರುತ್ತವೆ.

ಬೆಂಗಳೂರಿನ ಮ್ಯೂಸಿಯಂ ರಸ್ತೆಯಲ್ಲಿ ಸಂಜೆ ಅಂಚೆ ಕಚೇರಿ ಆರಂಭಿಸಲಾಗಿದ್ದು, ಉದ್ಯೋಗಕ್ಕೆ ತೆರಳುವವರಿಗೆ ಸಂಜೆ ಅಂಚೆ ಕಚೇರಿಯಿಂದ ಅನುಕೂಲವಾಗುತ್ತದೆ. ಕಳೆದ ನವೆಂಬರ್ ನಲ್ಲಿ ಪ್ರಾಯೋಗಿಕವಾಗಿ ಧಾರವಾಡದಲ್ಲಿ ರಾಜ್ಯದ ಮೊದಲ ಸಂಜೆ ಅಂಚೆ ಕಚೇರಿ ಆರಂಭಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿಯೂ ಆರಂಭಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಂಚೆ ಕಚೇರಿಗಳು ಸಾಮಾನ್ಯವಾಗಿ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3:30ರ ವರೆಗೆ ಮಾತ್ರ ಸೇವೆ ನೀಡಲಿದ್ದು, ಸಂಜೆ ಅಂಚೆ ಕಚೇರಿ ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ.

ಬೆಂಗಳೂರಿನಲ್ಲಿ ಮಧ್ಯಾಹ್ನ 3:30ಕ್ಕೆ ಅಂಚೆ ಸೇವೆ ಸ್ಥಗಿತಗೊಂಡ ನಂತರ ಸ್ಪೀಡ್ ಪೋಸ್ಟ್ ಗೆ ರಾಜಭವನ ರಸ್ತೆಯ ಜಿಪಿಓ ಗೆ ತೆರಳಬೇಕಿತ್ತು. ರಿಜಿಸ್ಟ್ರಾರ್ ಪೋಸ್ಟ್ ಮಾಡಲು ರೈಲ್ವೆ ನಿಲ್ದಾಣದ ಆರ್‌ಎಂಎಸ್‌ಗೆ ಹೋಗಬೇಕಾಗಿತ್ತು. ಸಂಜೆ ಅಂಚೆ ಕಚೇರಿಯಲ್ಲಿ ಸ್ಪೀಡ್ ಪೋಸ್ಟ್, ರಿಜಿಸ್ಟ್ರಾರ್ ಪೋಸ್ಟ್, ಪಾರ್ಸೆಲ್ ಸೇವೆ ಫಿಲಾಟಲಿ ಸೇಲ್ಸ್, ಆಧಾರ್ ತಿದ್ದುಪಡಿ ಸೇವೆ ನೀಡಲಾಗುತ್ತದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular