ಪ್ರಭಾಸ್ ಕೂಡ ‘ಆದಿಪುರುಷ್’ ಬಗ್ಗೆ ನಿರಾಸೆಗೊಂಡಿದ್ದಾರಾ ? ವೈರಲ್‌ ಆಗಿದೆ ಈ ವಿಡಿಯೋ

ʼಆದಿಪುರುಷ್ʼ ಚಿತ್ರದ ಬಗ್ಗೆ ಅಭಿಮಾನಿಗಳು ಹತಾಶೆ ವ್ಯಕ್ತಪಡಿಸುವಂತೆಯೇ ನಟ ಪ್ರಭಾಸ್ ಕೂಡ ಇದರಿಂದ ಹೊರತಾಗಿಲ್ಲ ಎಂದು ಗೊತ್ತಾಗಿದೆ. ಸಂಭಾಷಣೆ, ವಿಎಫ್ಎಕ್ಸ್ ಸೇರಿದಂತೆ ಹಲವು ಕಾರಣಗಳಿಗೆ ಓಂ ರಾವುತ್ ನಿರ್ದೇಶನದ ಆದಿಪುರುಷ್ ಭಾರೀ ಆಕ್ರೋಶದ ಚರ್ಚೆ ಹುಟ್ಟುಹಾಕಿದೆ.

ಈ ಚಲನಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗಿದ್ದರೂ, ಚಿತ್ರಮಂದಿರದಿಂದ ಹೊರಬರುವ ಪ್ರೇಕ್ಷಕರು ಓಂ ರಾವುತ್ ಅವರ ನಿರ್ದೇಶನದಿಂದ ಪ್ರಭಾವಿತರಾಗಿಲ್ಲ. ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಹಿರಿಯ ತಾರೆಯರು ಸಹ ಆದಿಪುರುಷ್ ಅನ್ನು ದೊಡ್ಡ ಜೋಕ್ ಎಂದು ಕರೆಯುತ್ತಿದ್ದಾರೆ.

ಸದ್ಯಕ್ಕೆ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳ ನಿರಾಶೆಯಷ್ಟೇ ಅಲ್ಲ ವಾಸ್ತವವಾಗಿ ಚಿತ್ರದ ನಾಯಕ ನಟ ಪ್ರಭಾಸ್ ಕೂಡ ಚಿತ್ರದ ಬಗ್ಗೆ ಅತೃಪ್ತಿ ತೋರುತ್ತಿದ್ದಾರೆ. ಇದೀಗ ಕೋಪಗೊಂಡ ಪ್ರಭಾಸ್ ಓಂ ರಾವುತ್ ಅವರನ್ನು ತನ್ನ ಕೋಣೆಗೆ ಕರೆಸಿಕೊಳ್ಳುವ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ.

ವೈರಲ್ ವೀಡಿಯೊದಲ್ಲಿ ಪ್ರಭಾಸ್ ಕೋಪಗೊಂಡಂತೆ ಕಾಣುತ್ತಿದ್ದು ಅವರು ನಿರ್ದೇಶಕ ಓಂ ರಾವುತ್ ಅವರನ್ನು ತಮ್ಮ ಕೋಣೆಯಲ್ಲಿ ಭೇಟಿಯಾಗುವಂತೆ ಕೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read