ಖಾಸಗಿ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಮಹತ್ವದ ಸೂಚನೆ ನೀಡಿದೆ. ಉದ್ಯೋಗಿಗಳ ರಾಜ್ಯ ವಿಮಾ ನಿಗಮ (ESIC) ಸೌಲಭ್ಯ ಪಡೆಯುತ್ತಿರುವವರು ತಮ್ಮ ESIC ಪೆಹ್‌ಚಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಕಡ್ಡಾಯವಾಗಿ ಲಿಂಕ್ ಮಾಡಿಕೊಳ್ಳಬೇಕು ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಸೂಚಿಸಿದೆ.
ಹೌದು. ESIC ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಮಹತ್ವದ ಸೂಚನೆ ನೀಡಿದೆ. ಈಎಸ್‌ಐ ಸೌಲಭ್ಯ ಪಡೆಯುತ್ತಿರುವ ಉದ್ಯೋಗಿಗಳು ತಮ್ಮ ESIC ಪೆಹ್‌ಚಾನ್ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡಿ, OTP ಮೂಲಕ ಆಧಾರ್ ಅಥೆಂಟಿಕೇಶನ್ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಈ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ESIC ಸೇವೆ ಹಾಗೂ ಸೌಲಭ್ಯಗಳನ್ನು ಪಡೆಯುವಲ್ಲಿ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ.
ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಈಎಸ್‌ಐ ಸೇವೆ ಹಾಗೂ ಸೌಲಭ್ಯಗಳನ್ನು ಪಡೆಯುವಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.
ಆಧಾರ್ ಅಥೆಂಟಿಕೇಶನ್ ಕಡ್ಡಾಯ
ಕೇಂದ್ರ ಕಾರ್ಮಿಕ ಸಚಿವಾಲಯದ ಸೂಚನೆಯಂತೆ, ಈಎಸ್‌ಐ ವ್ಯಾಪ್ತಿಯಲ್ಲಿರುವ ಉದ್ಯೋಗಿಗಳು ತಮ್ಮ ಆಧಾರ್ ಅಥೆಂಟಿಕೇಶನ್ ಪೂರ್ಣಗೊಳಿಸಬೇಕು. ಸಾಮಾಜಿಕ ಭದ್ರತಾ ಸಂಹಿತೆ-2020ರ ಸೆಕ್ಷನ್ 142ರ ಅನ್ವಯ ESIC ಸೇವೆಗಳಿಗೆ ಆಧಾರ್ ಅಥೆಂಟಿಕೇಶನ್ ಅಗತ್ಯವಾಗಿದೆ ಎಂದು ಸಚಿವಾಲಯ ತಿಳಿಸಿದೆ.
ESIC ಗುರುತಿನ ಚೀಟಿಗೆ ಆಧಾರ್ ಸೀಡಿಂಗ್ ಮಾಡಿಕೊಳ್ಳುವುದರಿಂದ ಅರ್ಹ ಫಲಾನುಭವಿಗಳಿಗೆ ಯಾವುದೇ ಅಡೆತಡೆಯಿಲ್ಲದೆ ಸೇವೆಗಳನ್ನು ಒದಗಿಸಲು ಸಹಾಯವಾಗಲಿದೆ. ನಕಲಿ ಖಾತೆಗಳನ್ನು ತಡೆಯುವುದು ಮತ್ತು ನಿಜವಾದ ಫಲಾನುಭವಿಗಳಿಗೆ ಸೌಲಭ್ಯಗಳು ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ.
ಆಧಾರ್ ಅನ್ನು ESICಗೆ ಹೇಗೆ ಲಿಂಕ್ ಮಾಡುವುದು?
-
ಮೊದಲು esic.gov.in ವೆಬ್‌ಸೈಟ್‌ಗೆ ಭೇಟಿ ನೀಡಿ.
-
ಹೋಮ್‌ಪೇಜ್‌ನಲ್ಲಿ ‘Insured Persons & Beneficiaries’ ಆಯ್ಕೆಯನ್ನು ಕ್ಲಿಕ್ ಮಾಡಿ.
-
ನಿಮ್ಮ User ID ಮತ್ತು Password ಬಳಸಿ ಲಾಗಿನ್ ಆಗಿ.
-
ನಂತರ ‘Aadhaar Seeding for IP’ ಆಯ್ಕೆಯನ್ನು ಆರಿಸಿ.
-
‘Click Here to Seed Aadhaar’ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
-
ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು OTP ಮೂಲಕ ದೃಢೀಕರಣ ಪೂರ್ಣಗೊಳಿಸಿ.
-
ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಿಮಗೆ Reference Number ದೊರೆಯುತ್ತದೆ.
-
ಪರಿಶೀಲನೆ ಪೂರ್ಣಗೊಂಡ ನಂತರ ನಿಮ್ಮ ಆಧಾರ್ ESIC ಖಾತೆಯೊಂದಿಗೆ ಲಿಂಕ್ ಆಗುತ್ತದೆ.
ಹೀಗಾಗಿ, ಈಎಸ್‌ಐ ಸೌಲಭ್ಯ ಪಡೆಯುತ್ತಿರುವ ಉದ್ಯೋಗಿಗಳು ಯಾವುದೇ ವಿಳಂಬ ಮಾಡದೆ ಆಧಾರ್ ಅಥೆಂಟಿಕೇಶನ್ ಹಾಗೂ ಸೀಡಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಸೂಕ್ತ.
ಈಎಸ್‌ಐ ಸೌಲಭ್ಯ ಪಡೆಯುತ್ತಿರುವ ಉದ್ಯೋಗಿಗಳು ಯಾವುದೇ ವಿಳಂಬ ಮಾಡದೆ ತಮ್ಮ ESIC ಪೆಹ್‌ಚಾನ್ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡಿ, OTP ಮೂಲಕ ಅಥೆಂಟಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಉತ್ತಮ. ಅರ್ಹ ಫಲಾನುಭವಿಗಳಿಗೆ ಯಾವುದೇ ಅಡೆತಡೆಯಿಲ್ಲದೆ ವೈದ್ಯಕೀಯ ಹಾಗೂ ಇತರ ಈಎಸ್‌ಐ ಸೌಲಭ್ಯಗಳು ದೊರೆಯಲು ಈ ಪ್ರಕ್ರಿಯೆ ಸಹಕಾರಿಯಾಗಲಿದೆ.

