HomeLatest NewsBIG NEWS : ರಾಜ್ಯದಲ್ಲಿ ಹೊಸ ವರ್ಷಕ್ಕೆ ಸಖತ್ ಕಿಕ್ ಕೊಟ್ಟ 'ಎಣ್ಣೆ' : 3...

BIG NEWS : ರಾಜ್ಯದಲ್ಲಿ ಹೊಸ ವರ್ಷಕ್ಕೆ ಸಖತ್ ಕಿಕ್ ಕೊಟ್ಟ ‘ಎಣ್ಣೆ’ : 3 ದಿನದಲ್ಲಿ 745.84 ಕೋಟಿ ರೂ. ಮದ್ಯ ಮಾರಾಟ


ಬೆಂಗಳೂರು : ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಕರ್ನಾಟಕದಲ್ಲಿ ದಾಖಲೆ ಮಟ್ಟದಲ್ಲಿ ಎಣ್ಣೆ ಸೇಲ್ ಆಗಿದೆ. ಹೌದು. ರಾಜ್ಯದಲ್ಲಿ ಹೊಸವರ್ಷಾಚರಣೆ ವೇಳೆ ಭರ್ಜರಿ ಮದ್ಯ ಸೇಲ್ ಆಗಿದ್ದು, , ಅಬಕಾರಿ ಇಲಾಖೆಗೆ ಭರ್ಜರಿ ಆದಾಯ ಬಂದಿದೆ. 3 ದಿನದಲ್ಲಿ 745.84 ಕೋಟಿ ರೂ. ಮದ್ಯ ಮಾರಾಟವಾಗಿದೆ.

2025 ಡಿಸೆಂಬರ್ ತಿಂಗಳ ಕೊನೆಯ 3 ದಿನಗಳಲ್ಲಿ 745.84 ರೂ ಕೋಟಿ ಮೌಲ್ಯದ ಇಂಡಿಯನ್ ಮೇಡ್ ಮದ್ಯ ಮತ್ತು ಬಿಯರ್ ಮಾರಾಟವಾಗಿದೆ. ಇದರಿಂದ ಅಬಕಾರಿ ಇಲಾಖೆಗೆ 587.51 ಕೋಟಿ ಆದಾಯ ಹರಿದು ಬಂದಿದೆ. 2024 ಕ್ಕೆ ಹೋಲಿಸಿದರೆ ಆದಾಯದಲ್ಲಿ ಶೇಕಡ 39.63ರಷ್ಟು ಹೆಚ್ಚಳವಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.

2025ರ ಡಿಸೆಂಬರ್ 29, 30 ಮತ್ತು 31ರ ನಡುವೆ 3 ದಿನಗಳ ಅವಧಿಯಲ್ಲಿ 9.84 ಲಕ್ಷ ಬಾಕ್ಸ್ ಭಾರತೀಯ ಮದ್ಯ ಹಾಗೂ 6.64 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ. ಡಿ.31ರಂದು 3.53 ಲಕ್ಷ ಬಾಕ್ಸ್ ಭಾರತೀಯ ಬಾಕ್ ಬಿಯರ್ ಮದ್ಯ ಹಾಗೂ 2.25 ಲಕ್ಷ ಬಾಕ್ಸ್ 2 ಮಾರಾಟವಾಗಿದೆ. 2024ರಲ್ಲಿ ಒಂದೇ ದಿನದಲ್ಲಿ ಅಬಕಾರಿ ಇಲಾಖೆಗೆ ₹266.73 ಕೋಟಿ ಆದಾಯ ಸಂಗ್ರಹವಾಗಿದ್ದರೆ, 2025ರಲ್ಲಿ 204 ಕೋಟಿ ಆದಾಯ ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2025ರ ಡಿಸೆಂಬರ್ ತಿಂಗಳಿನಲ್ಲಿ ಅಬಕಾರಿ ಆದಾಯ 3,559.08 ಕೋಟಿಗೆ ಏರಿಕೆಯಾಗಿದೆ. 2024ರ ಡಿಸೆಂಬರ್ನಲ್ಲಿ 3,104.50 ಕೋಟಿ ಆದಾಯ ಸಂಗ್ರ ಹವಾಗಿತ್ತು. 2024ರ ಡಿಸೆಂಬರ್ ತಿಂಗಳಲ್ಲಿ 61.82 ಲಕ್ಷ ಬಾಕ್ಸ್ ಭಾರತೀಯ ಮದ್ಯ ಹಾಗೂ 37.62 ಲಕ್ಷ ಬಾಕ್ಸ್ ಬಿಯರ್ಮಾರಾಟವಾಗಿತ್ತು. 2025ರಲ್ಲಿ ಕ್ರಮವಾಗಿ 63.71 ಲಕ್ಷ ಬಾಕ್ಸ್ ಭಾರತೀಯ ಮದ್ಯ ಹಾಗೂ 36.14 ಲಕ್ಸ ಬಾಕ್ಸ್ ಬಿಯರ್ ಮಾರಾಟವಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular