ಮಾಡಿ ಸವಿಯಿರಿ ಫ್ರೆಂಚ್ ಪೊಟ್ಯಾಟೋ ʼಸಲಾಡ್ʼ

ಬೇಕಾಗುವ ಪದಾರ್ಥಗಳು :

4 ಕ್ಯಾರೆಟ್, 3 ಟೊಮೆಟೊ, ಅರ್ಧ ಕಪ್ ವಿನೈಗ್ರೇಟ್ ಸಾಸ್, ಒಗ್ಗರಣೆಗೆ ಎಣ್ಣೆ – ಸಾಸಿವೆ, 250 ಗ್ರಾಂ ಬೇಯಿಸಿದ ಆಲೂಗಡ್ಡೆ, ರುಚಿಗೆ ತಕ್ಕಷ್ಟು ಉಪ್ಪು – ಮೆಣಸು – ಖಾರದ ಪುಡಿ, 1 ಬೆಂದ ಮೊಟ್ಟೆ, ಒಂದಿಷ್ಟು ಹೆಚ್ಚಿದ ಕೊತ್ತಂಬರಿ ಸೊಪ್ಪು.

ವಿನೈಗ್ರೇಟ್ ಸಾಸ್ ಗೆ ಬೇಕಾದ ಪದಾರ್ಥಗಳು :

2 ಚಮಚ ವಿನಿಗರ್, 4 ಚಮಚ ಆಲಿವ್ ಆಯಿಲ್, ಅಗತ್ಯವಿದ್ದಷ್ಟು ಉಪ್ಪು ಮೆಣಸು.

ತಯಾರಿಸುವ ವಿಧಾನ :

ಸಾಸ್ ಗಾಗಿ ಎಲ್ಲವನ್ನೂ ಬೆರೆಸಿ ಲಘುವಾಗಿ ಕುದಿಸಬೇಕು. ನೀಟಾಗಿ ಕ್ಯಾರೆಟ್ ತುರಿದಿಡಿ. ಇದಕ್ಕೆ 4 ಚಮಚ ವಿನೈಗ್ರೇಟ್ ಸಾಸ್ ಬೆರೆಸಿ 1 ತಾಸು ಹಾಗೇ ನೆನೆಯಲು ಬಿಡಿ. ನಂತರ ಉಳಿದ ಸಾಸ್ ಗೆ, ಸಾಸಿವೆ ಒಗ್ಗರಣೆಯನ್ನು ಬೆರೆಸಿಡಿ. ಒಂದು ಬಟ್ಟಲಿಗೆ ಆಲೂ, ಹೆಚ್ಚಿದ ಟೊಮೆಟೊ ಹಾಕಿಡಿ. ಇದಕ್ಕೆ ಕ್ಯಾರೆಟ್ ಮಿಶ್ರಣ, ಒಗ್ಗರಣೆ, ತುರಿದ ಬೆಂದ ಮೊಟ್ಟೆ, ಹೆಚ್ಚಿದ ಕೊತ್ತಂಬರಿ ಸೊಪ್ಪು, ಉಪ್ಪು-ಖಾರ ಎಲ್ಲಾ ಸೇರಿಸಿ ಚೆನ್ನಾಗಿ ಗೊಟಾಯಿಸಿ. ಊಟದ ಜೊತೆಗೆ ಸವಿಯಲು ಕೊಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read