HomeKarnatakaಎನ್’ಕೌಂಟರ್ ಬಳಿಕವೂ ಹನೂರು ಅರಣ್ಯದಲ್ಲಿ ನಿಲ್ಲದ ಬೇಟೆ; ಕಡವೆ ಹೊಡೆದು ಮಾಂಸ ಮಾಡಿದ ಬೇಟೆಗಾರರು!

ಎನ್’ಕೌಂಟರ್ ಬಳಿಕವೂ ಹನೂರು ಅರಣ್ಯದಲ್ಲಿ ನಿಲ್ಲದ ಬೇಟೆ; ಕಡವೆ ಹೊಡೆದು ಮಾಂಸ ಮಾಡಿದ ಬೇಟೆಗಾರರು!

ಚಾಮರಾಜನಗರ : ಹನೂರು ಅರಣ್ಯ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಎನ್‌ಕೌಂಟರ್‌ ಪ್ರಕರಣದ ಬೆನ್ನಲ್ಲೇ ಮತ್ತೊಂದು ವನ್ಯಜೀವಿ ಬೇಟೆ ಪ್ರಕರಣ ಬೆಳಕಿಗೆ ಬಂದಿದೆ. ಮಲೆಮಹದೇಶ್ವರ ವನ್ಯಜೀವಿ ಧಾಮದ ಉಡುತೊರೆಹಳ್ಳ ಜಲಾಶಯದ ಬಳಿ ಕಡವೆಯನ್ನು ಬೇಟೆಯಾಡಿ, ಅದರ ಮಾಂಸವನ್ನು ಮೂಟೆಯಲ್ಲಿ ತುಂಬಿಕೊಂಡಿದ್ದ ಆರೋಪಿಗಳು ಅರಣ್ಯ ಸಿಬ್ಬಂದಿಯನ್ನು ಕಂಡು ಪರಾರಿಯಾಗಿದ್ದಾರೆ.

ಉಡುತೊರೆಹಳ್ಳ ಜಲಾಶಯದ ಬಳಿ ಘಟನೆ

ಸೆಪ್ಟೆಂಬರ್‌ 1ರಂದು ಉಡುತೊರೆಹಳ್ಳ ಜಲಾಶಯದ ಸಮೀಪದ ಅರಣ್ಯ ಪ್ರದೇಶದಲ್ಲಿ ಬೇಟೆಗಾರರು ಕಡವೆಯನ್ನು ಬೇಟೆಯಾಡಿದ್ದಾರೆ ಎನ್ನಲಾಗಿದೆ. ಬಳಿಕ ಕಡವೆಯ ಮಾಂಸವನ್ನು ಕತ್ತರಿಸಿ ಮೂಟೆಯಲ್ಲಿ ತುಂಬಿಕೊಂಡು ಸಾಗಿಸಲು ಸಿದ್ಧತೆ ನಡೆಸಿದ್ದರು.

ಈ ವೇಳೆ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಬರುತ್ತಿರುವುದನ್ನು ಗಮನಿಸಿದ ಬೇಟೆಗಾರರು ಮಾಂಸದ ಮೂಟೆ ಹಾಗೂ ಬೇಟೆಯ ಸಾಮಗ್ರಿಗಳನ್ನು ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿಬ್ಬಂದಿ ಕಂಡು ಎಸ್ಕೇಪ್

ಅರಣ್ಯ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಬೇಟೆಯಾಡಿರುವುದು ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಕ್ರಮ ಕೈಗೊಂಡಿದ್ದು, ಸ್ಥಳದಲ್ಲಿ ದೊರೆತ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ಮುಂದುವರಿದಿದೆ.

ಹನೂರಿನಲ್ಲಿ ಮತ್ತೆ ಸಿಡಿದ ನಾಡಬಂದೂಕಿನ ಗುಂಡು!

ಹನೂರು ಅರಣ್ಯದಲ್ಲಿ ಬೇಟೆಗಾರರ ವಿರುದ್ಧ ನಡೆದ ಎನ್‌ಕೌಂಟರ್‌ ಪ್ರಕರಣದ ಬಳಿಕವೂ ವನ್ಯಜೀವಿಗಳ ಅಕ್ರಮ ಬೇಟೆ ಮುಂದುವರಿದಿರುವುದು ಆತಂಕಕ್ಕೆ ಕಾರಣವಾಗಿದೆ. ಇದೀಗ ಕಡವೆ ಬೇಟೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಅರಣ್ಯ ಪ್ರದೇಶದಲ್ಲಿ ಬೇಟೆ ತಡೆ ಕಾರ್ಯಾಚರಣೆಯನ್ನು ಮತ್ತಷ್ಟು ಬಿಗಿಗೊಳಿಸುವ ಅಗತ್ಯ ಎದುರಾಗಿದೆ.

ಮಲೆಮಹದೇಶ್ವರ ವನ್ಯಜೀವಿ ಧಾಮದಲ್ಲಿ ವನ್ಯಜೀವಿಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ಅಕ್ರಮ ಬೇಟೆಯ ಘಟನೆಗಳು ಸವಾಲಾಗಿ ಪರಿಣಮಿಸಿವೆ.

ಆಗಸ್ಟ್ 15, 2026ರಂದು ಹನೂರು ತಾಲೂಕಿನ ಕಾವೇರಿ ವನ್ಯಧಾಮದ ಶಾಗ್ಯ ಅರಣ್ಯ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿತ್ತು. ಅರಣ್ಯ ಇಲಾಖೆ ಪ್ರಕಾರ, ವನ್ಯಜೀವಿ ಬೇಟೆಗೆ ಬಂದಿದ್ದ ಶಂಕಿತ ಬೇಟೆಗಾರರು ಸಿಬ್ಬಂದಿ ಮೇಲೆ ಗುಂಡು ಹಾರಿಸಲು ಮುಂದಾದಾಗ ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಲಾಗಿತ್ತುಘಟನೆಯಲ್ಲಿ ಮೂವರು ಮೃತಪಟ್ಟಿದ್ದರು.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular