HomeIndiaBIG NEWS: ಮೋದಿ ಸರ್ಕಾರದಿಂದ 10 ವರ್ಷದಲ್ಲಿ 17 ಕೋಟಿ ಉದ್ಯೋಗ ಸೃಷ್ಟಿ

BIG NEWS: ಮೋದಿ ಸರ್ಕಾರದಿಂದ 10 ವರ್ಷದಲ್ಲಿ 17 ಕೋಟಿ ಉದ್ಯೋಗ ಸೃಷ್ಟಿ

ನವದೆಹಲಿ: ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿ ಉದ್ಯೋಗ ಸೃಷ್ಟಿಯು ಶೇಕಡ 36 ರಷ್ಟು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ.

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಪ್ರಕಾರ, 2014 ರಿಂದ 2024 ರವರೆಗೆ 17 ಕೋಟಿ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಕಳೆದ ವರ್ಷ ದೇಶದಲ್ಲಿ ಸುಮಾರು 4 ಕೋಟಿ 60 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. 2004 ರಿಂದ 2014 ರವರೆಗೆ ದಾಖಲಾದ ಶೇಕಡ 7 ರ ಬೆಳವಣಿಗೆಗಿಂತ 2014-2024 ರ ನಡುವೆ ಸಾಧಿಸಿದ ಶೇಕಡ 36 ರ ಉದ್ಯೋಗ ಬೆಳವಣಿಗೆ ದರವು ತುಂಬಾ ಉತ್ತಮವಾಗಿದೆ ಎಂದು ಸಚಿವಾಲಯ ಹೇಳಿದೆ.

ಯುಪಿಎ ಸರ್ಕಾರದ ಅಡಿಯಲ್ಲಿ, 2004 ರಿಂದ 2014 ರ ನಡುವೆ 2 ಕೋಟಿ 90 ಲಕ್ಷ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಲಾಯಿತು. ಮೋದಿ ಸರ್ಕಾರದ ಅಡಿಯಲ್ಲಿ ಕೃಷಿ ವಲಯದಲ್ಲಿ ಉದ್ಯೋಗಾವಕಾಶಗಳು ಶೇಕಡ 19, ಉತ್ಪಾದನಾ ವಲಯದಲ್ಲಿ ಶೇಕಡ 15 ಮತ್ತು ಸೇವಾ ವಲಯದಲ್ಲಿ ಶೇಕಡ 36 ರಷ್ಟು ಬೆಳವಣಿಗೆಯಾಗಿದೆ ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಚಿವಾಲಯದ ಪ್ರಕಾರ, ನಿರುದ್ಯೋಗ ದರವು 2017-18 ರಲ್ಲಿ ಶೇಕಡ 6 ರಿಂದ 2023-24 ರಲ್ಲಿ ಶೇಕಡ 3.2 ಕ್ಕೆ ಇಳಿದಿದೆ. ಪದವೀಧರ ಯುವಕರ ಉದ್ಯೋಗಾವಕಾಶವು 2013 ರಲ್ಲಿ ಶೇ. 33.95ರಿಂದ 2024 ರಲ್ಲಿ ಶೇಕಡ 54.81 ಕ್ಕೆ ಬೆಳೆದಿದೆ. ಕಳೆದ 7 ವರ್ಷಗಳಲ್ಲಿ 18 ರಿಂದ 28 ವರ್ಷ ವಯಸ್ಸಿನ 4 ಕೋಟಿ 70 ಲಕ್ಷ ಯುವಕರು EPFO ​​ಗೆ ಸೇರಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular