HomeKarnatakaಕನಕಪುರ ರಸ್ತೆ: ಮೊದಲ ಬಾರಿಗೆ ಆನೆ ಕಾರಿಡಾರ್ ಬಳಕೆ ಮಾಡಿದ ಆನೆ!

ಕನಕಪುರ ರಸ್ತೆ: ಮೊದಲ ಬಾರಿಗೆ ಆನೆ ಕಾರಿಡಾರ್ ಬಳಕೆ ಮಾಡಿದ ಆನೆ!

ಕರ್ನಾಟಕದಲ್ಲಿ ನಿರ್ಮಾಣ ಮಾಡಲಾಗಿರುವ ಮೊಟ್ಟ ಮೊದಲ ಆನೆ ಕಾರಿಡಾರ್‌ ಅನ್ನು ಆನೆ, ಚಿರತೆಗಳು ಬಳಕೆ ಮಾಡುತ್ತಿವೆ. ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ಕನಕಪುರ ರಸ್ತೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆ ಕಾರಿಡಾರ್ ನಿರ್ಮಾಣ ಮಾಡಲಾಗಿತ್ತು.

ಈ ಕಾರಿಡಾರ್‌ನಲ್ಲಿ ಪ್ರಾಣಿಗಳ ಚಲನವಲನ ದಾಖಲಿಸಲು ಕ್ಯಾಮರಾ ಫಿಕ್ಸ್ ಮಾಡಲಾಗಿತ್ತು. 2024ರಲ್ಲಿ ಪೂರ್ಣಗೊಂಡಿದ್ದ ಈ ಆನೆ ಕಾರಿಡಾರ್‌ನಲ್ಲಿ ಈಗ ಒಂಟಿ ಸಲಗ ದಾಟಿ ಹೋಗಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.

ಕನಕಪುರ ರಸ್ತೆಯಲ್ಲಿ ತಾತಗುಣಿ ಸಮೀಪ ಈ ಆನೆ ಕಾರಿಡಾರ್ ಇದೆ. ನೈಸರ್ಗಿಕ ದಾರಿಯಂತೆಯೇ ಕಾಣುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಆದರೆ ಆನೆ ಇದುವರೆಗೂ ಅದನ್ನು ಬಳಕೆ ಮಾಡಿರಲಿಲ್ಲ. ಚಿರತೆ ಆಗಾಗ ದಾಟುವುದು ದಾಖಲಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2023ರಲ್ಲಿ ಕನಕಪುರ ರಸ್ತೆಯಲ್ಲಿ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಆನೆ ಸ್ಥಳದಲ್ಲೇ ಮೃತಪಟ್ಟಿತ್ತು. ಬಳಿಕ ಪ್ರಾಣಿಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಜೋರಾಗಿತ್ತು. ಆಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮೇಲ್ಸೇತುವೆ ನಿರ್ಮಾಣ ಮಾಡಿತ್ತು.

ಇದು ಕಾಂಕ್ರೀಟ್ ಸೇತುವೆಯಾಗಿದ್ದರೂ ಸಹ ಬಿದಿರು, ಹುಲ್ಲುಗಳನ್ನು ಬೆಳೆಸುವ ಮೂಲಕ ಕಾಡಿನ ದಾರಿಯಂತೆಯೇ ಕಾಣುವಂತೆ ಮಾಡಲಾಗಿತ್ತು. ಈಗ ಈ ಕಾರಿಡಾರ್ ಮೂಲಕ ಆನೆ ಸಂಚಾರವನ್ನು ನಡೆಸಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸಂತಸಗೊಂಡಿದ್ದಾರೆ.

ಅಧಿಕಾರಿಗಳ ಮಾಹಿತಿ ಪ್ರಕಾರ ಮಾರ್ಚ್ 8ರ ಭಾನುವಾರ ಮುಂಜಾನೆ 3.58ರ ಸುಮಾರಿಗೆ ಒಂಟಿ ಸಲಗ ಯಾವುದೇ ಭಯವಿಲ್ಲದೇ ಆನೆ ಕಾರಿಡಾರ್ ಬಳಕೆ ಮಾಡಿಕೊಂಡು ರಸ್ತೆಯ ಮತ್ತೊಂದು ಭಾಗಕ್ಕೆ ಸಾಗಿದೆ.

ಚಿರತೆ, ಕಾಡು ಹಂದಿ, ಚಿಕ್ಕ ಪ್ರಾಣಿಗಳು ಈ ಕಾರಿಡಾರ್ ಮೂಲಕ ಸಾಗುತ್ತಿದ್ದ ಚಿತ್ರಗಳು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಮೊದಲ ಬಾರಿಗೆ ಕನಕಪುರ ರಸ್ತೆಯ ಆನೆ ಕಾರಿಡಾರ್‌ನಲ್ಲಿ ಒಂಟಿ ಸಲಗ ದಾಟಿ ಹೋಗಿದ್ದು, ದೂರದೃಷ್ಟಿಯ ಯೋಜನೆಗೆ ಫಲ ಸಿಕ್ಕಂತೆ ಆಗಿದೆ.

ಕರ್ನಾಟಕದಲ್ಲಿ ಸದ್ಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ 9 ಆನೆ ಕಾರಿಡಾರ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ರಾಜ್ಯದ ಮೊದಲ ಆನೆ ಕಾರಿಡಾರ್ ಮೂಲಕ ಈಗ ಆನೆ ಸಂಚಾರ ನಡೆಸಿದ್ದು, ಅರಣ್ಯ ಇಲಾಖೆಯ ಮುಂದಿನ ಯೋಜನೆಗೆ ಸಹಕಾರಿಯಾಗಿದೆ.

ಒಮ್ಮೆ ಸಾಗಿದ ರಸ್ತೆಯನ್ನು ಆನೆಗಳು ಮರೆಯುವುದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಆದ್ದರಿಂದ ಒಂಟಿ ಸಲಗ ಈ ಮಾರ್ಗದಲ್ಲಿ ಸಂಚಾರ ಮಾಡುವಾಗ ಹೆದ್ದಾರಿಗೆ ಬರದೇ ಆನೆ ಕಾರಿಡಾರ್ ಮೂಲಕವೇ ಸಂಚಾರವನ್ನು ನಡೆಸಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular