HomeKarnatakaBREAKING: ಪಂಪ್ ಸೆಟ್ ದುರಸ್ತಿ ವೇಳೆ ದುರಂತ: ವಿದ್ಯುತ್ ಪ್ರವಹಿಸಿ ನವವಿವಾಹಿತ ದುರ್ಮರಣ

BREAKING: ಪಂಪ್ ಸೆಟ್ ದುರಸ್ತಿ ವೇಳೆ ದುರಂತ: ವಿದ್ಯುತ್ ಪ್ರವಹಿಸಿ ನವವಿವಾಹಿತ ದುರ್ಮರಣ

ಮೈಸೂರು: ಪಂಪ್ ಸೆಟ್ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ನವವಿವಾಹಿತ ಸಾವನ್ನಪ್ಪಿರುವ ದಾರುಣ ಘಟನೆ ಮೈಸೂರು ಜಿಲ್ಲೆಯ ಕೆ.ಆರ್.ನಗರದಲ್ಲಿ ನಡೆದಿದೆ.

ಕೆ.ಆರ್.ನಗರ ತಾಲೂಕಿನ ಕೆಸ್ತೂರು ಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪಂಪ್ ಸೆಟ್ ಮೋಟಾರ್ ನಿಂದ ವಿದ್ಯುತ್ ಪ್ರವಹಿಸಿ 22 ವರ್ಷದ ಪುನೀತ್ ಸಾವನ್ನಪ್ಪಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಕ್ಕದ ಜಮೀನಿನಲ್ಲಿ ಪಂಪ್ ಸೆಟ್ ದುರಸ್ತಿ ಮಾಡಲು ಹೋದಾಗ ಈ ಘಟನೆ ನಡೆದಿದೆ. ದುರಂತದಲ್ಲಿ ಮೃತಪಟ್ಟ ಪುನೀತ್ ಗೆ ಇತ್ತೀಚೆಗಷ್ಟೇ ವಿವಾಹವಾಗಿತ್ತು. ಕೆ.ಆರ್.ನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular