ಬೆಂಗಳೂರು: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ(ಕೆಇಆರ್ಸಿ) ವಿದ್ಯುತ್ ದರಗಳನ್ನು ಪರಿಷ್ಕರಿಸಿದೆ. ಕೃಷಿ ಪಂಪ್ ಸೆಟ್ ಗಳಿಗೆ ಬಳಕೆ ಮಾಡುವ ವಿದ್ಯುತ್ ದರವನ್ನು ಯೂನಿಟ್ ಗೆ ಸರಾಸರಿ 95 ಪೈಸೆಯಷ್ಟು ಕಡಿಮೆ ಮಾಡಲಾಗಿದೆ.
ಕೈಗಾರಿಕೆ ಮತ್ತು ವಾಣಿಜ್ಯ ಬಳಕೆಯ ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ. ಎಸ್ಕಾಂಗಳು 2025 -26 ನೇ ಸಾಲಿಗೆ ನಿಗದಿಪಡಿಸಿದ ವಿದ್ಯುತ್ ದರ ಪರಿಷ್ಕರಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ಕೆಇಆರ್ಸಿ ಒಪ್ಪಿಗೆ ನೀಡಿ ಪರಿಷ್ಕೃತ ದರಗಳನ್ನು ಪ್ರಕಟಿಸಿದೆ.
ಎಲ್.ಟಿ. 3(ಎ) ವಾಣಿಜ್ಯ ವಿದ್ಯುತ್ ದರ 7 ರೂ.ನಿಂದ 7.10 ರೂ. ಆಗಿದೆ. ಎಲ್.ಟಿ. 5 ಕೈಗಾರಿಕೆ ವಿದ್ಯುತ್ ದರ 4.5 ರೂ.ನಿಂದ 5.20 ರೂ.ಗೆ ಪರಿಷ್ಕರಿಸಲಾಗಿದೆ. ಹೆಚ್.ಟಿ.2ಎ ಕೈಗಾರಿಕೆ ವಿದ್ಯುತ್ ದರ 6.60 ರೂ,.ನಿಂದ 6.70 ರೂ.ಗೆ ಹೆಚ್ಚಿಸಲಾಗಿದೆ. ಹೆಚ್.ಟಿ.2ಬಿ ಕೈಗಾರಿಕೆ ವಿದ್ಯುತ್ ದರವನ್ನು 5.95 ರೂ.ನಿಂದ 6.90 ರೂ.ಗೆ ಹೆಚ್ಚಿಸಲಾಗಿದೆ.
ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ ಬಳಕೆ ಮಾಡುವ ವಿದ್ಯುತ್ ದರವನ್ನು ಯೂನಿಟ್ ಗೆ 10 ಪೈಸೆಯಿಂದ ಗರಿಷ್ಠ 95 ಪೈಸೆಯವರೆಗೆ ಹೆಚ್ಚಳ ಮಾಡಲಾಗಿದೆ.
ಕೃಷಿ ಪಂಪ್ ಸೆಟ್ ಗಳಿಗೆ ಎಲ್ಲಾ ಎಸ್ಕಾಂಗಳ ವ್ಯಾಪ್ತಿಯಲ್ಲಿ ಒಂದೇ ರೀತಿ ಇದ್ದ ದರವನ್ನು ಪ್ರತ್ಯೇಕವಾಗಿ ನಿಗದಿಪಡಿಸಲಾಗಿದೆ.

