ಸಿಎಂ ಸೂಚನೆ ಮೇರೆಗೆ ಬಡ ಮಹಿಳೆಗೆ 24 ಗಂಟೆಯಲ್ಲೇ ವಿದ್ಯುತ್ ಸಂಪರ್ಕ

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸೂಚನೆ ಮೇರೆಗೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಬಸಾಪುಟ ಗ್ರಾಮ ದೊಣಮ್ಮ ಅವರ ಮನೆಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ.

ಬಡತನದ ಕಾರಣಕ್ಕೆ ದೊಣಮ್ಮ ಅವರು ವಿದ್ಯುತ್ ಸಂಪರ್ಕ ಪಡೆದುಕೊಂಡಿರಲಿಲ್ಲ. ಚಳ್ಳಕೆರೆಯ ಮಹೇಂದ್ರ ಎಂಬುವವರು ಈ ಬಗ್ಗೆ ಟ್ರೀಟ್ ಮಾಡಿ ಮುಖ್ಯಮಂತ್ರಿಗಳು ಮತ್ತು ಸಿಎಂ ಕಚೇರಿ ಗಮನ ಸೆಳೆದಿದ್ದರು.

ಮಾಹಿತಿ ದೊರೆತ 24 ಗಂಟೆಯಲ್ಲಿ ದೊಣಮ್ಮ ನಿವಾಸಕ್ಕೆ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ. ಮುಖ್ಯಮಂತ್ರಿಗಳ ಸೂಚನೆಯಂತೆ ಅಧಿಕಾರಿಗಳು ವಿದ್ಯುತ್ ಸೌಲಭ್ಯ ಕಲ್ಪಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಕೊಟ್ಟಿದ್ದಾರೆ.

https://twitter.com/CMofKarnataka/status/1695411124966207534

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read