HomeKarnatakaBIG NEWS: ಮತ್ತೊಂದು ದುರಂತ; ವಿದ್ಯುತ್ ಪ್ರವಹಿಸಿ ಕರೆಂಟ್ ಕಂಬದ ಮೇಲೆಯೇ ಜೀವಬಿಟ್ಟ ವ್ಯಕ್ತಿ

BIG NEWS: ಮತ್ತೊಂದು ದುರಂತ; ವಿದ್ಯುತ್ ಪ್ರವಹಿಸಿ ಕರೆಂಟ್ ಕಂಬದ ಮೇಲೆಯೇ ಜೀವಬಿಟ್ಟ ವ್ಯಕ್ತಿ


ಬೆಳಗಾವಿ: ವಿದ್ಯುತ್ ಲೈನ್ ದುರಸ್ಥಿ ವೇಳೆ ದುರಂತ ಸಂಭವಿಸಿದ್ದು, ವಿದ್ಯುತ್ ಪ್ರವಹಿಸಿ ಕಂಬದ ಮೇಲೆಯೇ ವ್ಯಕ್ತಿ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ.

ಸಿದ್ದರಾಮ ಮೃತ ದುರ್ದೈವಿ. ಹೆಸ್ಕಾಂ ಅಧಿಕರಿಗಳ ಬೇಜವಾಬ್ದಾರಿಯೇ ದುರಂತಕ್ಕೆ ಕಾರಣ ಎಂದು ಮೃತನ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆಸ್ಕಾಂ ಅಧಿಕಾರಿಗಳು ತಮ್ಮ ಸಿಬ್ಬಂದಿಗಳನ್ನು ಬಿಟ್ಟು, ಸಿದ್ದರಾಮನನ್ನು ವಿದ್ಯುತ್ ಕಂಬಕ್ಕೆ ಹತ್ತಿಸಿದ್ದಾರೆ. ಈ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿದ್ದು, ವ್ಯಕ್ತಿ ಕಂಬದ ಮೇಲೆಯೇ ಉಸಿರು ಚೆಲ್ಲಿದ್ದಾರೆ ಎಂದು ಆರೋಪಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

6 ತಿಂಗಳಿಂದ ಕೆಇಬಿ ಕೆಲಸಕ್ಕೆಂದು ಸಿದ್ದರಾಮ ಹೋಗುತ್ತಿದ್ದರು. ಹೆಸ್ಕಾಂ ಅಧಿಕಾರಿಗಳು ತಾವು ಕಂಬದ ಕೆಳಗೆ ನಿಂತು ಇವರನ್ನು ಕಂಬ ಹತ್ತಿಸಿದ್ದಾರೆ. ಲೈನ್ ದುರಸ್ತಿ ಬಗ್ಗೆ ಆತನಿಗೆ ಯಾವುದೇ ತರಬೇತಿಯೂ ಆಗಿಲ್ಲ. ಅಧಿಕಾರಿಗಳ ಬೇಜವಾಬ್ದಾರಿಗೆ ಸಿದ್ದರಾಮ ಬಲಿಯಾಗಿದ್ದಾರೆ ಎಂದು ಕುಟುಂಬ ಕಣ್ಣೀರಿಟ್ಟಿದೆ.

For Latest News Updates, Join Our Whatsapp Community🚩
RELATED ARTICLES

Most Popular