ಮತದಾರರ ಪಟ್ಟಿ ಸುಧಾರಣೆಗೆ ಚುನಾವಣಾ ಆಯೋಗ ಮಹತ್ವದ ಕ್ರಮ

ನವದೆಹಲಿ: ಮತದಾರರ ಪಟ್ಟಿಯನ್ನು ದೋಷರಹಿತವಾಗಿ ರೂಪಿಸಲು ಮುಂದಾಗಿರುವ ಚುನಾವಣಾ ಆಯೋಗ ಮೂರು ಸುಧಾರಣೆಗೆ ಮುಂದಾಗಿದೆ.

ಮತದಾರರ ಪಟ್ಟಿ ಪರಿಷ್ಕರಿಸಲು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾದಿಂದ ಮರಣ ನೋಂದಣಿ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಪಡೆಯಲು ಚುನಾವಣಾ ಆಯೋಗ ನಿರ್ಧರಿಸಿದೆ.

ಇದರೊಂದಿಗೆ ಮತದಾರರ ಮಾಹಿತಿ ಒಳಗೊಂಡ ಚೀಟಿಗಳನ್ನು ಮತದಾರ ಸ್ನೇಹಿಯಾಗಿ ರೂಪಿಸಲು ಚೀಟಿಗಳ ವಿನ್ಯಾಸ ಮಾರ್ಪಡಿಸಲು ಆಯೋಗ ಮುಂದಾಗಿದೆ. ಮತದಾರರ ನೋಂದಣಿ ಅಭಿಯಾನದ ವೇಳೆ ನಾಗರೀಕರು ಸುಲಭವಾಗಿ ಗುರುತಿಸಲು ವಿಶ್ವಾಸದಿಂದ ಮಾಹಿತಿ ನೀಡುವ ಸಂಬಂಧ ನೋಂದಣಿ ಕೈಗೊಳ್ಳುವ ಬೂತ್ ಮಟ್ಟದ ಅಧಿಕಾರಿಗಳಿಗೆ ಗುರುತಿನ ಚೀಟಿ ನೀಡಬೇಕು ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಚುನಾವಣಾ ಆಯೋಗ ಸೂಚನೆ ನೀಡಿದೆ.

1960ರ ಮತದಾರರ ನೋಂದಣಿ ಕಾಯ್ದೆ, 1969ರ ಜನನ ಮತ್ತು ಮರಣಗಳ ನೋಂದಣಿ ಕಾಯ್ದೆಯಡಿ ಮರಣದ ಕುರಿತ ಮಾಹಿತಿಯನ್ನು ಪಡೆಯಲು ಚುನಾವಣಾ ಆಯೋಗಕ್ಕೆ ಅವಕಾಶ ಕಲ್ಪಿಸಲಾಗಿದೆ. ಮತದಾರರ ಪಟ್ಟಿಯಲ್ಲಿನ ಹೆಸರುಗಳನ್ನು ಮತಗಟ್ಟೆ ಅಧಿಕಾರಿಗಳು ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆ ಮತದಾರರ ಕ್ರಮ ಸಂಖ್ಯೆ ಹಾಗೂ ಭಾಗ ಸಂಖ್ಯೆಯನ್ನು ದಪ್ಪ ಅಕ್ಷರಗಳಲ್ಲಿ ಮುರ್ದಿಸಲು ನಿರ್ಧರಿಸಿದೆ.

ಮತದಾರರ ನೋಂದಣಿ ಅಧಿಕಾರಿಗಳಿಗೆ ಮರಣಗಳ ಬಗ್ಗೆ ಸಕಾಲಿಕ ಮಾಹಿತಿ ಒದಗಿಸಲು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾದಿಂದ ಮರಣ ನೋಂದಣಿ ಕುರಿತ ಅಧಿಕೃತ ಮಾಹಿತಿ ಪಡೆಯಲು ನಿರ್ಧರಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read