HomeLatest NewsSHOCKING NEWS: ತಮ್ಮನನ್ನೇ ಗುಂಡಿಟ್ಟು ಹತ್ಯೆಗೈದ ಅಣ್ಣ!

SHOCKING NEWS: ತಮ್ಮನನ್ನೇ ಗುಂಡಿಟ್ಟು ಹತ್ಯೆಗೈದ ಅಣ್ಣ!

ಮಡಿಕೇರಿ: ಅಣ್ಣ-ತಮ್ಮನ ನಡುವೆ ಆಸ್ತಿಗಾಗಿ ಆರಂಭವಾದ ಕಲಹ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಭ್ಯತ್ ಮಂಗಲದಲ್ಲಿ ನಡೆದಿದೆ.

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅಣ್ಣನೇ ತಮ್ಮನನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾನೆ. ಕೊಳಂಬೆ ವಿನು ಬೆಳ್ಯಪ್ಪ (53) ಮೃತ ದುರ್ದೈವಿ. ಮಣಿ ತಮ್ಮನನ್ನೇ ಹತ್ಯೆಗೈದ ಅಣ್ಣ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಭ್ಯತ್ ಮಂಗಲದಲ್ಲಿ ತೋಟದ ಗೋದಾಮಿನಲ್ಲಿ ಪೈಪ್ ಗಳ ಪರಿಶೀಲನೆಗೆಂದು ವಿನು ಬೆಳ್ಯಪ್ಪ ತೆರಳಿದ್ದರು. ಈ ವೇಳೆ ಹಿಂದಿನಿಂದ ಬಂದ ಸಹೋದರಮಣಿ ಏಕಾಏಕಿ ತಮ್ಮನ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡೇಟಿಗೆ ವಿನು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆ ಬಳಿಕ ಆರೋಪಿ ಮಣಿ ಪರಾರಿಯಾಗಲು ಯತ್ನಿಸಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular