Shocking News: 5 ವರ್ಷದ ಮಗನನ್ನು ಕೊಂದು ತಲೆಯ ಭಾಗಗಳನ್ನು ಬೇಯಿಸಿ ತಿಂದ ಮಹಿಳೆ

ಮಹಿಳೆಯೊಬ್ಬಳು ತನ್ನ 5 ವರ್ಷದ ಸ್ವಂತ ಮಗನನ್ನು ಕೊಂದು (murder) ತಲೆಯ ಭಾಗಗಳನ್ನು ಬೇಯಿಸಿ ತಿಂದ ಭೀಕರ ಘಟನೆ ಈಜಿಪ್ಟ್ ನಲ್ಲಿ ನಡೆದಿದೆ.

29 ವರ್ಷದ ಹನಾ ಮೊಹಮ್ಮದ್ ಹಸನ್ ಎಂಬ ಮಹಿಳೆ ಈ ಕೃತ್ಯ ಎಸಗಿದ್ದಾಳೆ. ಆಯುಧದಿಂದ ಯೂಸಫ್ ಎಂಬ 5 ವರ್ಷ ಮಗನ ತಲೆಗೆ ಮೂರು ಬಾರಿ ಹೊಡೆದು ಕೊಂದಿದ್ದಾಳೆ. ನಂತರ, ಪುರಾವೆ (Proof) ಗಳನ್ನು ನಾಶಪಡಿಸಲು ಅವಳು ಅವನ ದೇಹವನ್ನು ಛಿದ್ರಗೊಳಿಸಿದ್ದಾಳೆ ಎಂದು ವರದಿಯಾಗಿದೆ.

ಮಹಿಳೆ ಅಡುಗೆ ಮಾಡಿ ಮಗನ ತಲೆಯ ಒಂದು ಭಾಗವನ್ನು ಬೇಯಿಸಿ ತಿಂದಿದ್ದಾಳೆ ಎಂಬ ಬೆಚ್ಚಿ ಬೀಳಿಸುವ ಘಟನೆ ವರದಿಯಾಗಿದೆ. ಅವಳು ತನ್ನ ಮಗನ ತಲೆ ಮತ್ತು ಇತರ ಮಾಂಸವನ್ನು ಸೇವಿಸುವ ಮೊದಲು ಒಲೆಯ ಮೇಲೆ ಕುದಿಯುವ ನೀರಿನಲ್ಲಿ (boiling water) ಬೇಯಿಸಿದಳು ಎಂದು ತಿಳಿದುಬಂದಿದೆ. ಅಬು ಶಲಾಬಿ, ಅಶ್ ಶರ್ಕಿಯಾ ಗವರ್ನರೇಟ್ ನಲ್ಲಿರುವ ಮನೆಯಲ್ಲಿ ಸಂತ್ರಸ್ತೆಯ ಚಿಕ್ಕಪ್ಪ ಬಕೆಟ್ ಗಳಲ್ಲಿ ದೇಹದ ಭಾಗಗಳನ್ನು ನೋಡಿದ್ದು, ನಂತರ ಈ ಘಟನೆ ಬೆಳಕಿಗೆ ಬಂದಿದೆ.

ತನ್ನ ಮಾಜಿ ಪತಿ ವಿರುದ್ಧ ಸೇಡು ತೀರಿಸಿಕೊಳ್ಳುವುದಕ್ಕಾಗಿ, ಮಾಜಿ ಪತಿಯ (ex-husband) ಸಂಪರ್ಕವನ್ನು ಸಂಪೂರ್ಣವಾಗಿ ಬಿಡುವುದಕ್ಕಾಗಿ ಈ ನಿರ್ಧಾರವನ್ನು ತೆಗೆದುಕೊಂಡೆ ಎಂದು ಪೊಲೀಸ್ ವಿಚಾರಣೆ ಸಮಯದಲ್ಲಿ ತಿಳಿಸಿದ್ದಾಳೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read