HomeIndiaHAL ಗೆ ಸೇರಿದ ವಾಯುಪ್ರದೇಶ ಹಿನ್ನೆಲೆ ಹೊಸೂರು ವಿಮಾನ ನಿಲ್ದಾಣಕ್ಕೆ ರಕ್ಷಣಾ ಸಚಿವಾಲಯ ವಿರೋಧ

HAL ಗೆ ಸೇರಿದ ವಾಯುಪ್ರದೇಶ ಹಿನ್ನೆಲೆ ಹೊಸೂರು ವಿಮಾನ ನಿಲ್ದಾಣಕ್ಕೆ ರಕ್ಷಣಾ ಸಚಿವಾಲಯ ವಿರೋಧ

ನವದೆಹಲಿ: ಕರ್ನಾಟಕದ ಗಡಿ ಪ್ರದೇಶ ಹೊಸೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಮಾಡುವ ತಮಿಳುನಾಡು ಸರ್ಕಾರದ ಪ್ರಸ್ತಾಪವನ್ನು ರಕ್ಷಣಾ ಸಚಿವಾಲಯ ಮತ್ತೆ ತಿರಸ್ಕರಿಸಿದೆ.

ಆ ಪ್ರದೇಶವು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(HAL) ವ್ಯಾಪ್ತಿಗೆ ಒಳಪಡುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಬಹುದು ಎಂದು ಹೇಳಿದೆ ಈ ಹಿಂದೆ ಬೆಂಗಳೂರು ವಿಮಾನ ನಿಲ್ದಾಣದಿಂದ 150 ಕಿಲೋಮೀಟರ್ ಗಿಂತ ಸಮೀಪ ಎಂದು ಕೈ ಬಿಡಲಾಗಿತ್ತು. ಈಗ ರಕ್ಷಣಾ ಸಚಿವಾಲಯವು ಆ ವಾಯು ಪ್ರದೇಶ ಎಚ್ಎಎಲ್ ವ್ಯಾಪ್ತಿಗೆ ಸೇರಿದ್ದು ವಿಮಾನ ಸಂಚಾರದಿಂದ ಕಾರ್ಯಾಚರಣೆಗೆ ಅಡಚಣೆ ಆಗಬಹುದು ಎಂದು ತಮಿಳುನಾಡು ಸರ್ಕಾರದ ಪ್ರಸ್ತಾಪವನ್ನು ತಿರಸ್ಕರಿಸಿದೆ.

ಭಾರತೀಯ ರಕ್ಷಣಾ ಉತ್ಪಾದಕ ಕಂಪನಿಯಾಗಿರುವ ಎಚ್ಎಎಲ್ ಆ ವಾಯು ಪ್ರದೇಶವನ್ನು ಹಾರಾಟ ಪರೀಕ್ಷೆ ತರಬೇತಿಯಂತಹ ಕಾರ್ಯಗಳಿಗೆ ಬಳಸುತ್ತದೆ. ಅಲ್ಲಿ ನಾಗರಿಕ ವಿಮಾನಗಳ ಹಾರಾಟ ಆರಂಭವಾದರೆ ಅಡಚಣೆಯಾಗುತ್ತದೆ. ರಾಷ್ಟ್ರೀಯ ಭದ್ರತೆಗೆ ಅಪಾಯವಾಗುವ ಸಾಧ್ಯತೆ ಇದೆ. ಆದ್ದರಿಂದ ಅನುಮತಿ ಸಿಗುತ್ತಿಲ್ಲವೆಂದು ಕಾರಣ ನೀಡಲಾಗಿದೆ. ಇದರ ಹೊರತಾಗಿಯೂ ತಮಿಳುನಾಡು ಸರ್ಕಾರ ಕೇಂದ್ರಕ್ಕೆ ಮೇಲ್ಮನವಿ ಅಥವಾ ಪರ್ಯಾಯ ಸ್ಥಳದ ಚಿಂತನೆ ನಡೆಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2025 ಜೂನ್ ನಲ್ಲಿ ತಮಿಳುನಾಡು ಸರ್ಕಾರದ ಮನವಿಯನ್ನು ತಿರಸ್ಕರಿಸಲಾಗಿತ್ತು. ನವೆಂಬರ್ ನಲ್ಲಿ ಮತ್ತೆ ವಿಸ್ತೃತ ಮನವಿ ಸಲ್ಲಿಸಲಾಗಿತ್ತು. ಅದನ್ನು ಕೂಡ ರಕ್ಷಣಾ ಸಚಿವಾಲಯ ತಿರಸ್ಕರಿಸಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular