ಭೂಕಬಳಿಕೆ ಪ್ರಕರಣದಲ್ಲಿ ಇಡಿಯಿಂದ ಸಂದೇಶಖಾಲಿ ಆರೋಪಿ ಶೇಖ್ ಷಹಜಹಾನ್ ಅರೆಸ್ಟ್

ನವದೆಹಲಿ: ಭೂಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಶನಿವಾರ ಟಿಎಂಸಿ ನಾಯಕ ಶೇಖ್ ಷಹಜಹಾನ್ ನನ್ನು ಬಂಧಿಸಿದೆ.

ಆರೋಪಿಯನ್ನು ಈಗಾಗಲೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇಡಿ ಬಸಿರ್‌ ಹತ್ ಜೈಲಿನಲ್ಲಿ ಶೇಖ್‌ ನನ್ನು ವಿಚಾರಣೆ ನಡೆಸಿತು. ಇದಕ್ಕೂ ಮೊದಲು ಆತನನ್ನು ಕೇಂದ್ರ ತನಿಖಾ ದಳ(ಸಿಬಿಐ) ಬಂಧಿಸಿತ್ತು. ಸೋಮವಾರ, ಜೈಲು ಆಡಳಿತವು ಶೇಖ್‌ನನ್ನು ಪ್ರೊಡಕ್ಷನ್ ವಾರಂಟ್‌ನಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದೆ, ಅಲ್ಲಿಯವರೆಗೆ ಅವರು ಜೈಲಿನಲ್ಲೇ ಇರುತ್ತಾರೆ.

ಬಂಧಿತ ಶೇಖ್ ಷಹಜಹಾನ್ ವಿರುದ್ಧದ ಪಿಎಂಎಲ್‌ಎ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಪಶ್ಚಿಮ ಬಂಗಾಳದ ಸಂದೇಶಖಾಲಿಯಲ್ಲಿ ಹಲವು ಸ್ಥಳಗಳಲ್ಲಿ ಅರೆಸೇನಾ ಪಡೆಗಳೊಂದಿಗೆ ದಾಳಿ ನಡೆಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read