ಈ ಆಹಾರ ʼಪದಾರ್ಥʼಗಳನ್ನು ಹಸಿಯಾಗಿ ತಿಂದರೆ ಹದಗೆಡುತ್ತೆ ಆರೋಗ್ಯ

ಕೆಲವು ಆಹಾರ ಪದಾರ್ಥಗಳನ್ನು ಹಸಿಯಾಗಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಯಾಕೆಂದರೆ ಬೇಯಿಸಿದ ಆಹಾರದಲ್ಲಿ ಪೋಷಕಾಂಶಗಳು ನಾಶವಾಗುತ್ತದೆ ಎಂದು. ಆದರೆ ಕೆಲವೊಂದು ಆಹಾರ ಪದಾರ್ಥಗಳನ್ನು ಹಸಿಯಾಗಿ ತಿಂದರೆ ನಮ್ಮ ಆರೋಗ್ಯ ಹಾಳುಗುತ್ತದೆ. ಅವು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

* ಮೊಳಕೆ ಕಾಳು ಯಾವುದೇ ಇರಲಿ ಅದನ್ನು ಹಸಿಯಾಗಿ ತಿನ್ನಬಾರದು. ಯಾಕೆಂದರೆ ಅದರಲ್ಲಿರುವ ಒಂದು ಬ್ಯಾಕ್ಟೀರಿಯಾ ನಮ್ಮ ರೋಗನಿರೋಧಕ ಶಕ್ತಿಯನ್ನು ನಾಶ ಮಾಡುತ್ತದೆಯಂತೆ.

* ಟೊಮೆಟೊವನ್ನು ಹಸಿಯಾಗಿ ತಿನ್ನಬಾರದು. ಯಾಕೆಂದರೆ ಅದರಲ್ಲಿರುವ ಗ್ಲೈಕೋ ಆಲ್ಕಲೈಡ್ಸ್ ಹೊಟ್ಟೆ ಸೇರಿದಾಗ ಆ್ಯಸಿಡ್ ಆಗಿ ಪರಿವರ್ತನೆಯಾಗಿ ಅಸಿಡಿಟಿಗೆ ಕಾರಣವಾಗುತ್ತದೆ.

* ಹಸಿರು ಸೊಪ್ಪುಗಳನ್ನು ಕೂಡ ಹಸಿಯಾಗಿ ತಿನ್ನಬಾರದು. ಯಾಕೆಂದರೆ ಅದರಲ್ಲಿರುವ ಆಗ್ಸಾನಿಕ್ ಆ್ಯಸಿಡ್ ನಮ್ಮ ದೇಹದಲ್ಲಿರುವ ಐರನ್ ಹಾಗೂ ಕ್ಯಾಲ್ಸಿಯಂನ್ನು ಕಡಿಮೆ ಮಾಡುತ್ತದೆ.

* ಅಣಬೆಯನ್ನು ಹಸಿಯಾಗಿ ತಿಂದರೆ ಅದರಲ್ಲಿರುವ ಪ್ಯಾಸಿನೋಜಿನಿಕ್ ಎಂಬ ಅಂಶ ಶರೀರಕ್ಕೆ ಸೇರಿದರೆ ವಿಷಪೂರಿತವಾಗುತ್ತದೆ.

* ಹಸಿ ಹಾಲು ಕುಡಿಯಬಾರದು. ಇದರಲ್ಲಿರುವ ಬ್ಯಾಕ್ಟೀರಿಯಾ ಹೊಟ್ಟೆ ಸೇರಿದರೆ ವಾಂತಿ-ಭೇದಿಯಾಗುತ್ತದೆ. ಹಾಗೇ ಹಸಿ ಮೊಟ್ಟೆಯನ್ನು ಕೂಡ ತಿನ್ನಬಾರದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read