HomeHealthಉತ್ತಮ ಆರೋಗ್ಯಕ್ಕೆ ಸಿಪ್ಪೆ ಸಮೇತ ತಿನ್ನಿ 'ಸೇಬು'

ಉತ್ತಮ ಆರೋಗ್ಯಕ್ಕೆ ಸಿಪ್ಪೆ ಸಮೇತ ತಿನ್ನಿ ‘ಸೇಬು’

ದಿನಾ ಒಂದು ಸೇಬು ತಿನ್ನುವುದು ಒಳ್ಳೆಯದು. ಆದರೆ ಸೇಬಿನ ಸಿಪ್ಪೆಯನ್ನು ತೆಗೆದು ತಿನ್ನುತ್ತಿದ್ದರೆ, ಇನ್ನು ಮುಂದೆ ಸಿಪ್ಪೆಯನ್ನು ಬಿಸಾಕದೇ ಅದರ ಸಹಿತ ತಿನ್ನಿ.

ಆದರೆ ಸಿಪ್ಪೆಯಲ್ಲಿ ಯಾವುದೇ ರಾಸಾಯನಿಕ ಅಂಶ ಹಾಗೂ ಮೇಣವಿಲ್ಲವೆಂದು ಖಚಿತಪಡಿಸಿಕೊಂಡು ತಿಂದರೆ ಉತ್ತಮ. ಯಾಕೆಂದರೆ……

* ಸೇಬಿನ ಸಿಪ್ಪೆಯಲ್ಲಿರುವ ಪೋಷಕಾಂಶಗಳು ಹೃದಯ ಸಂಬಂಧಿ ಸಮಸ್ಯೆಗಳನ್ನು ದೂರ ಮಾಡುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* ಸಿಪ್ಪೆಯಲ್ಲಿ ಕ್ಯಾಲ್ಶಿಯಂ, ಪೊಟ್ಯಾಶಿಯಂ, ಫಾಸ್ಪೋರಸ್‌, ಫೋಲೆಟ್‌, ಐರನ್‌ ಮೊದಲಾದ ಪೌಷ್ಟಿಕಾಂಶಗಳಿದ್ದು, ಇದರ ಸೇವನೆಯಿಂದ ಶರೀರದ ಮೂಳೆಗಳು ಸದೃಢವಾಗುತ್ತವೆ. ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ನಿಯಂತ್ರಣ ಮಾಡಲು ಸಹಕರಿಸುತ್ತದೆ.

* ಸಿಪ್ಪೆ ಸಮೇತವಾಗಿ ಸೇಬು ತಿನ್ನುವುದರಿಂದ ದೇಹದ ದುರ್ಬಲತೆ ದೂರವಾಗುತ್ತದೆ ಹಾಗೂ ಕೊಲೆಸ್ಟ್ರಾಲ್‌ ಮತ್ತು ಬ್ಲಡ್‌ ಶುಗರ್‌ ಲೆವೆಲ್‌ ಕಡಿಮೆ ಮಾಡಲು ಸಹಾಯವಾಗುತ್ತದೆ.

* ಸೇಬಿನಲ್ಲಿ ಮಿನರಲ್ಸ್‌ ಹೆಚ್ಚಾಗಿ ಇರುವುದರಿಂದ ದಂತಕ್ಷಯ ಉಂಟಾಗುವುದಿಲ್ಲ.

* ಸೇಬಿನ ಸಿಪ್ಪೆ ಗರ್ಭಿಣಿಯರಲ್ಲಿ ಕಂಡು ಬರುವ ರಕ್ತಹೀನತೆ ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

* ಇದು ತೂಕ ಕಡಿಮೆ ಮಾಡಲು ನೆರವಾಗುತ್ತದೆ.

* ಸೇಬು ಹಣ್ಣಿನ ಸಿಪ್ಪೆಯಲ್ಲಿ ಸಿಗುವಂತಹ ಅಂಶ ಲಿವರ್‌, ಬ್ರೆಸ್ಟ್‌ ಮತ್ತು ಕರುಳಿನ ಕ್ಯಾನ್ಸರ್‌ ವಿರುದ್ಧ ಹೋರಾಡಲು ಸಹಕರಿಸುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular