HomeLatest Newsಸುಲಭವಾಗಿ ಮಾಡಿಕೊಂಡು ಕುಡಿಯಿರಿ ʼಪುದೀನಾʼ ಜ್ಯೂಸ್

ಸುಲಭವಾಗಿ ಮಾಡಿಕೊಂಡು ಕುಡಿಯಿರಿ ʼಪುದೀನಾʼ ಜ್ಯೂಸ್

ಬೇಸಿಗೆಕಾಲದಲ್ಲಿ ಏನಾದರೂ ತಂಪು ತಂಪು ಜ್ಯೂಸ್ ಕುಡಿಯಬೇಕು ಅನಿಸುತ್ತದೆ. ಹಾಗಿದ್ರೆ ತಡವೇಕೆ ಸುಲಭವಾಗಿ ಮಾಡಿಕೊಂಡು ಕುಡಿಯುವ ಪುದೀನಾ ಜ್ಯೂಸ್ ಇಲ್ಲಿದೆ. ಇದು ಆರೋಗ್ಯಕ್ಕೂ ಒಳ್ಳೆಯದು. ದೇಹಕ್ಕೂ ತಂಪು.
ಮೊದಲಿಗೆ ಎರಡು ಲಿಂಬೆ ಹಣ್ಣುಗಳನ್ನು ತೆಗೆದುಕೊಂಡು ಕತ್ತರಿಸಿ ಅದರ ರಸ ಹಿಂಡಿಕೊಳ್ಳಿ.

ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಳ್ಳಿ. ನಂತರ 2 ಟೇಬಲ್ ಸ್ಪೂನ್ ಸಕ್ಕರೆಯನ್ನು ಕೂಡ ಮಿಕ್ಸಿ ಜಾರಿಗೆ ಹಾಕಿಕೊಳ್ಳಿ. ನಂತರ ಚೆನ್ನಾಗಿ ತೊಳೆದ ಪುದಿನಾ ಎಲೆ 1 ½ ಕಪ್ ನಷ್ಟು ಮಿಕ್ಸಿ ಜಾರಿಗೆ ಹಾಕಿ. ಹಾಗೇ 4 ಐಸ್ ಕ್ಯೂಬ್ಸ್ ಗಳನ್ನು ಮಿಕ್ಸಿ ಹಾಕಿ. ಸ್ವಲ್ಪ ನೀರನ್ನು ಸೇರಿಸಿಕೊಂಡು ರುಬ್ಬಿಕೊಳ್ಳಿ. ನಂತರ ಇದನ್ನು ಶೋಧಿಸಿಕೊಂಡು ಒಂದು ಗ್ಲಾಸ್ ಗೆ ಹಾಕಿಕೊಂಡು ಕುಡಿಯಿರಿ.

For Latest News Updates, Join Our Whatsapp Community🚩
RELATED ARTICLES

Most Popular