ಇಸ್ಲಾಮಾಬಾದ್(ಪಾಕಿಸ್ತಾನ): ಗುರುವಾರ ಪಾಕಿಸ್ತಾನದಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ಪಂಜಾಬ್ ಪ್ರಾಂತ್ಯದ ಮುಲ್ತಾನ್ ಬಳಿ ಕೇಂದ್ರಬಿಂದು ದಾಖಲಾಗಿದೆ ಎಂದು ಭಾರತದ ಭೂಕಂಪಶಾಸ್ತ್ರ ರಾಷ್ಟ್ರೀಯ ಕೇಂದ್ರ ತಿಳಿಸಿದೆ.
ಭೂಕಂಪವು 10 ಕಿಲೋಮೀಟರ್ ಆಳದಲ್ಲಿ ಅಕ್ಷಾಂಶ 30.14 ಉತ್ತರ ಮತ್ತು ರೇಖಾಂಶ 70.36 ಪೂರ್ವಕ್ಕೆ ಸಂಜೆ 4.06 ರ ಸುಮಾರಿಗೆ(ಭಾರತೀಯ ಪ್ರಮಾಣಿತ ಸಮಯ) ಸಂಭವಿಸಿದೆ.
ಯಾವುದೇ ಸಾವುನೋವು ಅಥವಾ ಆಸ್ತಿ ಹಾನಿಯ ವರದಿಯಾಗಿಲ್ಲ.
ಈ ವಾರ ಪಾಕಿಸ್ತಾನದಲ್ಲಿ ಸಂಭವಿಸಿದ ಎರಡನೇ ಭೂಕಂಪ ಇದಾಗಿದೆ. ಮಂಗಳವಾರ, ಮೇ 27 ರಂದು, ಪಂಜಾಬ್‌ನ ಫೈಸಲಾಬಾದ್ ವಿಭಾಗದ ಜಾಂಗ್ ತೆಹಸಿಲ್ ಬಳಿ 4.2 ತೀವ್ರತೆಯ ಭೂಕಂಪ ಸಂಭವಿಸಿದೆ.
111 ಕಿಲೋಮೀಟರ್ ಆಳದಲ್ಲಿ ಕಂಪನ ಸಂಭವಿಸಿದ್ದು, ಇದರ ಕೇಂದ್ರಬಿಂದು 31.31°N ಅಕ್ಷಾಂಶ ಮತ್ತು 72.52°E ರೇಖಾಂಶದಲ್ಲಿದೆ.

