HomeInternationalBREAKING: ನೇಪಾಳದಲ್ಲಿ ಭಾರೀ ಪ್ರಬಲ ಭೂಕಂಪ, ಉತ್ತರ ಭಾರತದಲ್ಲೂ ಕಂಪಿಸಿದ ಭೂಮಿ

BREAKING: ನೇಪಾಳದಲ್ಲಿ ಭಾರೀ ಪ್ರಬಲ ಭೂಕಂಪ, ಉತ್ತರ ಭಾರತದಲ್ಲೂ ಕಂಪಿಸಿದ ಭೂಮಿ

ನವದೆಹಲಿ: ನೇಪಾಳದ ಗೋಕರ್ಣೇಶ್ವರ ಬಳಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 6ರಿಂದ 7ರಷ್ಟು ದಾಖಲಾಗಿದೆ.

ನೇಪಾಳದಲ್ಲಿನ ಭೂಕಂಪದಿಂದ ಭಾರತದ ಹಲವೆಡೆ ಭೂಮಿ ಕಂಪಿಸಿದೆ. ದೆಹಲಿ, ಎನ್.ಸಿ.ಆರ್. ಪ್ರದೇಶ, ಬಿಹಾರ, ಮತ್ತು ಉತ್ತರ ಭಾರತದ ಹಲವು ಕಡೆಗಳಲ್ಲಿ ಕಂಪನದ ಅನುಭವವಾಗಿದ್ದು, ಆತಂಕಗೊಂಡ ಜನ ಮನೆಯಿಂದ ಹೊರಗೆ ಬಂದಿದ್ದಾರೆ.

ಇಂದು 06:35:16 IST ಕ್ಕೆ ನೇಪಾಳದ ಲೋಬುಚೆಯ ಈಶಾನ್ಯಕ್ಕೆ 93 ಕಿಮೀ ದೂರದಲ್ಲಿ ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯ ಭೂಕಂಪ ಸಂಭವಿಸಿದೆ. ನೇಪಾಳ, ಬಾಂಗ್ಲಾದೇಶ, ಭಾರತ, ಭೂತಾನ್ ಮತ್ತು ಚೀನಾಗಳಲ್ಲಿ ಕಂಪನದ ಪರಿಣಾಮ ಉಂಟಾಗಿದೆ ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular