ಶರೀರದ ಒಂದೊಂದು ʼಅಂಗʼ ಹೇಳುತ್ತೆ ಒಂದೊಂದು ಭವಿಷ್ಯ…..!

ವರಾಹ ಸಂಹಿತೆ, ನಾರದ ಸಂಹಿತೆ ಮತ್ತು ಭವಿಷ್ಯ ಪುರಾಣದಲ್ಲಿ ಶರೀರದ ಅಂಗಗಳನ್ನು ನೋಡಿ ಭವಿಷ್ಯ ಸಿದ್ಧಪಡಿಸಲಾಗಿದೆ. ಗರುಡ ಪುರಾಣ, ಮಹಾಭಾರತದಲ್ಲಿ ಕೂಡ ಸ್ತ್ರೀ ಪುರುಷರ ಅಂಗ ನೋಡಿ ಶುಭ-ಅಶುಭ ಫಲಗಳ ಬಗ್ಗೆ ಹೇಳಲಾಗಿದೆ. ಕೈ, ಮೂಗು, ಕಣ್ಣು, ಮುಖ, ಸೊಂಟ ಸೇರಿದಂತೆ ದೇಹದ ಬೇರೆ ಬೇರೆ ಭಾಗಗಳ ಲಕ್ಷಣ ಬೇರೆ ಬೇರೆ ಭವಿಷ್ಯವನ್ನು ಹೇಳುತ್ತದೆ.

ನಾಲಿಗೆ ಮೂಗಿನ ತುದಿ ಮುಟ್ಟಿದ್ರೆ ಅಂಥ ವ್ಯಕ್ತಿಗಳು ಹೆಚ್ಚು ಪ್ರಸಿದ್ದಿ ಪಡೆಯುತ್ತಾರೆ ಎಂದರ್ಥ. ದೊಡ್ಡ ವ್ಯಕ್ತಿಗಳ ಸಹಾಯ ಇವ್ರಿಗೆ ಸಿಗಲಿದೆ. 35 ವರ್ಷದಿಂದ 43 ವರ್ಷ ತುಂಬಾ ಶುಭಕರವಾಗಿರಲಿದೆ.

ಬಾಯಿಯಲ್ಲಿ 32 ಹಲ್ಲುಗಳಿದ್ದರೆ ನೀವು ಹೇಳುವ ಮಾತುಗಳೆಲ್ಲ ಸತ್ಯವಾಗುತ್ತ ಹೋಗುತ್ತವೆ. ಜೀವನ ಸುಖಕರವಾಗಿ ನಡೆಯಲಿದೆ. ಬಾಯಿಯಲ್ಲಿ ಬೆಸ ಸಂಖ್ಯೆಯಷ್ಟು ಹಲ್ಲುಗಳಿದ್ದರೆ ಜೀವನ ಕಷ್ಟಕರವಾಗಿರುತ್ತದೆ. ಸಮ ಸಂಖ್ಯೆಯ ಹಲ್ಲುಗಳಿದ್ದರೆ ಜೀವನ ಸುಖಕರವಾಗಿರುತ್ತದೆ. ಯಾವುದೇ ವಸ್ತುವಿಗೆ ಕೊರತೆಯಾಗುವುದಿಲ್ಲ.

ಕಣ್ಣು ರೆಪ್ಪೆ ಪದೇ ಪದೇ ಮಿಟುಕಿಸುತ್ತಿದ್ದರೆ ಅಂತ ವ್ಯಕ್ತಿಗಳು ನಂಬಲು ಅರ್ಹರಾಗಿರುವುದಿಲ್ಲ. ಅಂತವರಿಗೆ ಮನಸ್ಸಿನ ಮಾತನ್ನು ಹೇಳಬಾರದು.

 ಪುರುಷರ ಬಲ ಭಾಗದಲ್ಲಿ ಮಚ್ಚೆಯಿದ್ದರೆ ಶುಭವೆಂದು ಪರಿಗಣಿಸಲಾಗಿದೆ. ದೇಹದಲ್ಲಿ 12ಕ್ಕಿಂತಲೂ ಹೆಚ್ಚು ಮಚ್ಚೆಯಿರುವುದು ಅಶುಭವೆಂದು ನಂಬಲಾಗಿದೆ.

ಕೈ ಬೆರಳಿನ ಹಿಂಭಾಗದಲ್ಲಿ ಕೂದಲಿದ್ದ ಪುರುಷರು ಚುರುಕು ಬುದ್ಧಿಯವರಾಗಿರುತ್ತಾರೆ. ಮಹಿಳೆಯರ ಕೈನಲ್ಲಿ ಕೂದಲಿದ್ದರೆ ಅದು ಅಶುಭ.

ಪುರುಷರ ಬಲ ಕಾಲು ಹಾಗೂ ಮಹಿಳೆಯರ ಎಡ ಕಾಲಿನ ಕಿರು ಬೆರಳು ನೆಲಕ್ಕೆ ತಾಗದೆ ಹೋದ್ರೆ ಅಂಥವರು ಅನೇಕ ವಿಚಾರದಲ್ಲಿ ಮೋಸ ಹೋಗ್ತಾರೆ.

ಗಿಣಿ ಮೂಗು ಹೊಂದಿರುವ ಅಥವಾ ದೊಡ್ಡ ಮೂಗಿನ ಜನರಿಗೆ ಜೀವನದಲ್ಲಿ ಹಣದ ಕೊರತೆ ಎದುರಾಗುವುದಿಲ್ಲ. ಇಂಥ ಜನರಿಗೆ ಅನೇಕ ರಹಸ್ಯಗಳು ತಿಳಿದಿರುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read