HomeEntertainment'ಇ-ಮೇಲ್' ಚಿತ್ರದ ವಿಡಿಯೋ ಹಾಡು ರಿಲೀಸ್

‘ಇ-ಮೇಲ್’ ಚಿತ್ರದ ವಿಡಿಯೋ ಹಾಡು ರಿಲೀಸ್

ಎಸ್ ಆರ್ ರಾಜನ್ ನಿರ್ದೇಶನದ ರಾಗಿಣಿ ದ್ವಿವೇದಿ ನಟನೆಯ ‘ಇ-ಮೇಲ್’ ಚಿತ್ರದ ‘ಸಿಂಡ್ರೆಲ್ಲಾ’ ಎಂಬ ರೋಮ್ಯಾಂಟಿಕ್ ವಿಡಿಯೋ ಹಾಡೊಂದನ್ನು ಸಿರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ.

ಅಭಿಷೇಕ್ ಈ ಹಾಡಿಗೆ ಧ್ವನಿಯಾಗಿದ್ದು, ಗವಾಸ್ಕರ್ ಅವಿನಾಶ್ ಸಂಗೀತ ಸಂಯೋಜನೆ ನೀಡಿದ್ದಾರೆ. ಸಂತೋಷ್ ನಾಯಕ್ ಸಾಹಿತ್ಯ ಬರೆದಿದ್ದಾರೆ.

ನಿರ್ದೇಶಕ ಎಸ್ ಆರ್ ರಾಜನ್ ಈ ಚಿತ್ರವನ್ನು ಎಸ್ ಆರ್ ಫಿಲಂ ಫ್ಯಾಕ್ಟರಿ ಬ್ಯಾನರ್ ನಲ್ಲಿ  ನಿರ್ಮಾಣ ಮಾಡಿದ್ದು,  ರಾಗಿಣಿ ದ್ವಿವೇದಿ ಹಾಗೂ ಮುರುಗ ಅಶೋಕ್ ಸೇರಿದಂತೆ ಅಕ್ಷಯ್ ರಾಜ್, ಅರತಿ ಶ್ರೀ, ಮಂಜು ನಂಜನಗೂಡು, ಶೈಲಜ, ಕುಮಾರಿ ಸಿಂಚನ, ನಯನ ತೆರೆ ಹಂಚಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜೇಶ್ ಕುಮಾರ್ ಅವರ ಸಂಕಲನ, ಸೆಲ್ವನ್ ಮಾದಪ್ಪನ್ ಛಾಯಾಗ್ರಹಣವಿದೆ. ಕನ್ನಡ ಹಾಗೂ ತಮಿಳಿನಲ್ಲಿ ಈ ಸಿನಿಮಾ ಏಕಕಾಲಕ್ಕೆ  ರಿಲೀಸ್ ಮಾಡುವುದಾಗಿ ಚಿತ್ರತಂಡ ಇತ್ತೀಚಿಗಷ್ಟೇ ವಾಹಿನಿಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular